ಧಾರವಾಡ: ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಪೊಲೀಸರು ಧಾರವಾಡ ತಾಲೂಕಿನ ಉಪ್ಪಿನಬೇಟಗೇರಿ ಗ್ರಾಮದಲ್ಲಿ ಬಂಧಿಸಿದ್ದಾರೆ.
ಗ್ರಾಮದ ಖುಲ್ಲಾ ಜಾಗೆಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ಸಂದರ್ಭದಲ್ಲಿ ಪಿಎಸ್ ಐ ಪ್ರಕಾಶ ಡಿ. ಮತ್ತು ಸಿಬ್ಬಂದಿ ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ. ಅವರಿಂದ 5,200 ರೂಪಾಯಿ ನಗದು ಹಾಗೂ ಜೂಜಾಟ ಸಲಕರಣೆಗಳನ್ನು ವಶಕ್ಕೆ ಪೊಲೀಸರು ಪಡೆದುಕೊಂಡಿದ್ದಾರೆ.
ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





