ಹುಬ್ಬಳ್ಳಿ:ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಂದು ಮುಂಜಾನೆ ಹುಬ್ಬಳ್ಳಿ ಈದ್ಗಾ ಮೈದಾನ ಆವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮುಸ್ಲಿಂ ಸಮುದಾಯದ ಎಲ್ಲರೂ ಸೇರಿ ಒಟ್ಟಾಗಿ (ನಮಾಜ್)ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಹು-ಧಾ ಸರ್ವ ಧರ್ಮ ಸ್ವಯಂ ಸೇವಕರು.(ರಿ) ಹಾಗೂ ಸೌದಾಗರ್ ಶಾಮಿನ ಸಪ್ಲೈಯರ ವತಿಯಿಂದ.ಬೆಳಗ್ಗೆ 11.30 ಗಂಟೆಗೆ ಸಮಯಕ್ಕೆ ಜೀ ಅಡ್ಡ ಪಿ.ಬಿ.ರಸ್ತೆಯಲ್ಲಿ ಪವಿತ್ರ ರಂಜಾನ್ ಹಬ್ಬದ ದಿನದ ಮುಸ್ಲಿಂ ಸಮುದಾಯದ ನಮಾಜ್ ಪ್ರಾರ್ಥನೆಸಲ್ಲಿಸಿ.ಎಲ್ಲರೂ ತಮ್ಮ ಮನೆಗೆ ತೆರಳುವ ವೇಳೆಯಲ್ಲಿ ಮುಸ್ಲಿಂ ಸಹೋದರರಿಗೆ ಹಾಲು ಮತ್ತು ಶರಬತ್ತು ಪಾನಕ ಹಂಚುವ ಮುಖಾಂತರ ಸೇವಾ ಕಾರ್ಯ ಕೆಲಸಕ್ಕೆ ಮುಂದಾಗಿ ಬಾವೈಕ್ಯತೆಗೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಆನಂದ ದಲಬಂಜನ ,ಮಾಬೂಲಿ ಸೌದಾಗರ್, ಗೋಪಾಲ್ ಧಾರವಾಡಕರ್, ಕಿರಣ ಇರಕಲ್ ಉದಯ್ ಕುಮಾರ್ ರೋಕಡೆ, ವೂಟವಲೆ ಮೊಹಮ್ಮದ್ ರೋನ ಅಶೋಕ್ ಬಾಕಳೆ ಬಸವರಾಜ ನ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತಿಯಲ್ಲಿದ್ದರೂ.
bigtvnews | Hubli Dharwad News | Kannada News | Karnataka News Hubli News | News In Hubli | Local news

