Breaking News

ವಾರಿಯರ್ಸ್ ಗೆ ಮಣಿದ ಯುಪಿ ಯೋಧರು

ಹೈದರಾಬಾದ್​: ಪ್ರೋ ಕಬಡ್ಡಿ ಟೂರ್ನಿಯ 6 ನೇ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್ ವಿರುದ್ಧ​ ಯುಪಿ ಯೋಧರಿಗೆ ಹೀನಾಯ ಸೋಲಾಗಿದೆ. ರೈಡಿಂಗ್‌ ಹಾಗು ಡಿಫೆಂಡಿಂಗ್ ಎರಡಲ್ಲೂ ಮಿಂಚಿದ ಬೆಂಗಾಲ್‌ ತಂಡ 48-17 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.ವಾರಿಯರ್ಸ್ ತಂಡ​ ಯುಪಿ ಯೋಧ ತಂಡವನ್ನು 4 ಬಾರಿ ಆಲೌಟ್​ ಮಾಡುವ ಮೂಲಕ ಅದ್ಭುತ ಆಟ ಪ್ರದರ್ಶಿಸಿತು.ವಾರಿಯರ್​ ತಂಡದ ರೈಡರ್​ ಇಸ್ಮಾಯಿಲ್​ ನಬಿಬಕ್ಷ್​ 10 ಅಂಕಗಳಿಸಿ ಸೂಪರ್​ ರೈಡರ್​​ ಎನಿಸಿಕೊಂಡರು. ಇವರಿಗೆ ಸಾಥ್​ ನೀಡಿದ ಮಣಿಂದರ್​ ಸಿಂಗ್​ 9 ಅಂಕ ಹಾಗೂ ಕೆ ಪ್ರಪಂಜನ್​ 5 ಅಂಕ ಸಂಪಾದಿಸಿದರು. ಡಿಫೆಂಡಿಂಗ್​ ವಿಭಾಗದಲ್ಲಿ​ ಬಲ್ದೇವ್​ ಸಿಂಗ್​ 7, ರಿಂಕು ನರ್ವಾಲ್​ 4, ಜೀವಾ ಕುಮಾರ್​ 3 ಅಂಕ ಗಿಟ್ಟಿಸಿಕೊಂಡರು.ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ಯುಪಿ ಯೋದ ತಂಡ ವಾರಿಯರ್​ ವಿರುದ್ಧ ಪ್ರತಿರೋಧ ಒಡ್ಡಲು ಯಾವುದೇ ಹಂತದಲ್ಲೂ ಸಾಧ್ಯವಾಗಲಿಲ್ಲ. ಮೋನು ಗೋಯಟ್​ 6 ಅಂಕ ಪಡೆದರೆ ಸುರೇಂದರ್​ ಸಿಂಗ್​ 3 ನಿತೀಸ್​ ಕುಮಾರ್​ 3 ಅಂಕ ಪಡೆದರು.

Share News

About admin

Check Also

ವಿರಾಟ್ ಕೊಹ್ಲಿ ಕೌಟುಂಬಿಕ ಕಾರಣಗಳಿಗೆ ತವರಿಗೆ ಮರಳಿದ್ದಾರೆ…..

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಟೀಮ್ ಇಂಡಿಯಾ ಅಂಗಳದಿಂದ ಎರಡು ದೊಡ್ಡ ಸುದ್ದಿ ಬಂದಿದೆ. ದಕ್ಷಿಣ ಆಫ್ರಿಕಾ …

Leave a Reply

Your email address will not be published. Required fields are marked *

You cannot copy content of this page