Breaking News

ಜಾತಿ ಭೇದ ಮರೆತು ನಾವೆಲ್ಲರೂ ಒಂದೇ ಎಂದು ದರ್ಗಾದಲ್ಲಿ ಪೂಜೆ ಸಲ್ಲಿಸುತ್ತಿರುವ ಹಿಂದೂ ಮಹಿಳೆ


ಹುಬ್ಬ್ಬಳ್ಳಿ: ಧರ್ಮ ಧರ್ಮಗಳ ಮಧ್ಯೆ ಕೋಮು ಗಲಭೆ ನಡೆಯುತ್ತಿದೆ. ಮಂದಿರಗಳಲ್ಲಿ ಧ್ವನಿವರ್ಧಕ ಹಚ್ಚುವ ಗೊಂದಲ… ಇದರ ನಡುವೆ ನಾವೆಲ್ಲರೂ ಒಂದೆ.. ಒಂದೆ ತಾಯಿಯ ಮಕ್ಕಳಿದ್ದಂತೆ ಎಂಬಂತೆ ಇಲ್ಲೊಂದು ದರ್ಗಾದಲ್ಲಿ ಹಿಂದೂ ಮಹಿಳೆಯೊಬ್ಬರು ಪೂಜೆ ಮಾಡುವ ಮೂಲಕ ಭಾವೈಕ್ಯತೆಯ ಸಂಕೇತವಾಗಿದೆ.

ಹೀಗೆ ದರ್ಗಾದಲ್ಲಿ ಪೂಜೆ ಮಾಡುತ್ತಿರುವ ಈ ಹಿಂದೂ ಮಹಿಳೆಯ ಹೆಸರು ಹನಮವ್ವ ಗುಡಗುಂಟಿ. ಹುಬ್ಬಳ್ಳಿ ಕೇಶ್ವಾಪೂರದ ರಾಮನಗರ ದೂದಪಿರಾ ದರ್ಗಾ. ಕಳೇದ 62 ವರ್ಷಗಳಿಂದ ಗುಡಗುಂಟಿ ಮನೆತನದವರು ಈ ದರ್ಗಾದಲ್ಲಿ ಪೂಜೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ಮುಸ್ಲಿಂ ಸಮುದಾಯದವರು ಕೂಡ ಇವರಿಗೆ ಅಷ್ಟೇ ಸಪೋರ್ಟ್ ಮಾಡಿದ್ದಾರೆ. ಇಲ್ಲಿಯವರೆಗೆ ಯಾರು ಕೂಡ ಇವರಿಗೆ ತಕರಾರು ಮಾಡಿಲ್ಲವಂತೆ. ಮುಸ್ಲಿಂ ದವರು ಬಂದು ಇಲ್ಲಿ ನಮಾಜ್ ಮಾಡಿ ಹೋಗುತ್ತಾರೆ. ಹೀಗೆ ಪೂಜೆ ಮಾಡುತ್ತಿರುವ ಹನಮವ್ವ ಅವರು ಅನೇಕ ವರ್ಷಗಳಿಂದ ಈ ದರ್ಗಾಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ತಾಯಿಯ ತೀರಿ ಹೋದ ನಂತರ ಇವರು ಮುಂದುವರೆಸಿಕೊಂಡು ಬರುತಿದ್ದೆನೆ ಎನ್ನುತ್ತಾರೆ.

ಈ ದರ್ಗಾದಲ್ಲಿ ಒಂದು ಕಡೆ ಹಿಂದೂಗಳು ಪೂಜೆ ಮಾಡುತಿದ್ದರೆ. ಇನ್ನೊಂದಡೆ ಮುಸ್ಲಿಂರು ನಮಾಜ್ ಮಾಡುತ್ತಾರೆ. ಹೀಗೆ ಎಲ್ಲ ಧರ್ಮದವರು ಭಾವೈಕ್ಯತೆಯಿಂದ ಸಾಮರಸ್ಯದಿಂದ ಸಮಾಜದಲ್ಲಿ ಶಾಂತಿ ನೆಲೆಸುವಂತ ಹಿಂತಹ ಭಾವೈಕ್ಯತೆಯ ಕೇಂದ್ರಗಳು ಹೆಚ್ಚಾಗಲಿ ಎಂದು ಎಲ್ಲರು ಸೇರಿ ಪ್ರತಿ ವರ್ಷ ಸಂದಲ್ ಮತ್ತು ಉರುಸು ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಜಾತಿ ಧರ್ಮ ಎಂದು ಕಚ್ಚಾಡುತ್ತಿರವರ ಮಧ್ಯ ಕೇಶ್ವಾಪೂರ ರಾಮನಗರದಲ್ಲಿರುವ ದೂದಪೀರಾ ದರ್ಗಾದಲ್ಲಿ ಹಿಂದೂ ಮನೆತನದವರು ಪೋಜೆ ಸಲ್ಲಿಸುತ್ತಿರುವುದು ಎಲ್ಲರಲ್ಲೂ ಸಂತಸ ಮೂಡಿದೆ….

Share News

About BigTv News

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *