ಧಾರವಾಡ: ಕರ್ನಾಟಕ ಹೈಕೋರ್ಟ್ ಧಾರವಾಡ ಆವರಣದ ಎ.ಆರ್.ಜಿ ರವರ ವಸತಿ ಗೃಹದಲ್ಲಿರುವ 2 ನೇರಳೆ ಮರ ಹಾಗೂ ವಾಲ್ಮೀ ಉಚ್ಚನ್ಯಾಯಾಲಯದ ಕಂಪೌಂಡಗೆ ಹೊಂದಿಕೊಂಡಿರುವ 11 ವಿವಿಧ ಜಾತಿಯ ಜಂಗ್ಲಿ ಮರಗಳು ಸೇರಿದಂತೆ ಒಟ್ಟು 13 ಮರಗಳನ್ನು ಹಾಗೂ ಹುಬ್ಬಳ್ಳಿ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಮಳೆ ಗಾಳಿಗೆ ಬಿದ್ದ ಐವತ್ತು ಮರಗಳನ್ನು ಧಾರವಾಡ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಮೇ 17 ಮತ್ತು ಮೇ 24 ರಂದು 11 ಗಂಟೆ ಮತ್ತು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ನಡೆಸಲಾಗುವುದು .
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0836-2447092 ಸಂಪರ್ಕಿಸಬಹುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

