Breaking News

ಅಕ್ಕಿ ಕದಿಮನನ್ನು ಬಂಧಿಸಿದ ಪೋಲಿಸರು


ಕಲಘಟಗಿ : ಪಟ್ಟಣದ ಹಳಿಯಾಳ ರಸ್ತೆಯ ಗೋದಾಮು ಬಳಿ ನಿಲ್ಲಿಸಿದ್ದ ಅಕ್ಕಿಸಾಗಣೆ ಲಾರಿ ಕಳವು ಆರೋಪದಡಿ ಪೊಲೀಸರು ಒಬ್ಬನನ್ನು ಶುಕ್ರವಾರ ಬಂಧಿಸಿದ್ದಾರೆ .

ತಾಲೂಕಿನ ಶೀಗಿಗಟ್ಟಿ ಗ್ರಾಮದ ಶಂಕ್ರಯ್ಯಬಸಯ್ಯ ಹಿರೇಮಠ ಬಂಧಿತ ಆರೋಪಿ , ಹುಬ್ಬಳ್ಳಿಯಿಂದ ಕಲಘಟಗಿ ಮಾರ್ಗವಾಗಿ ದಾಂಡೇಲಿಗೆ 260 ಚೀಲ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು . ಪಟ್ಟಣದ ಯುವಶಕ್ತಿ ಸರ್ಕಲ್ ಬಳಿ ನಿಲ್ಲಿಸಿದ್ದಲಾರಿಯನ್ನು ಕದ್ದು ತಾಲೂಕಿನ ಅರೆಬಸನಕೊಪ್ಪ ಗ್ರಾಮದ ಬಳಿ ಬಿಟ್ಟು ಪರಾರಿಯಾಗಿದ್ದರು . ಈ ಕುರಿತು ಲಾರಿ ಮಾಲೀಕ ನಾರಾಯಣ ರಾಮಚಂದ್ರ ಜಾಧವ್ ಅವರು ದೂರು ಸಲ್ಲಿಸಿದ್ದರು . ಪ್ರಕರಣ ದಾಖಲಿಸಿಕೊಂಡು ಪಿಐ ಶ್ರೀಶೈಲ ಕೌಜಲಗಿ ಕಾರ್ಯಾಚರಣೆ ಕೈಗೊಂಡಿದ್ದರು .

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *