Breaking News

ಅನೈತಿಕ ಸಂಬಂಧ : ಪ್ರಿಯಕರನ ಜತೆಗೆ ಸೇರಿ ಕರುಳ ಕುಡಿಯನ್ನೇ ಕೊಲೆ ಮಾಡಿದ ಸಹೋದರಿ

ಹುಬ್ಬಳ್ಳಿ : ನೂಲ್ವಿ ಗ್ರಾಮದಲ್ಲಿ ನಡೆದ ಕೊಲೆಯ ರಹಸ್ಯವನ್ನು ಭೇದಿಸಿವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಕಳೆದ ಎರಡೂ ದಿನಗಳ ಹಿಂದೆ ಶಂಭುಲಿಂಗ ಕಮಡೊಳ್ಳಿ(35) ಎಂಬ ಯುವಕನನ್ನು
ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲಿಯೆ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅನೈತಿಕ ಸಂಬಂಧಕ್ಕೆ ಸಹೋದರ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಸಹೋದರಿ ಬಸವ್ವ ನರಸಣ್ಣವರ ಹಾಗೂ ಆಕೆಯ ಪ್ರಿಯಕರ ಚನ್ನಪ್ಪ ಮರೆಪ್ಪಗೌರಡ ಸೇರಿಕೊಂಡು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದರು.

ಪೊಲೀಸರಿಗೆ ಸಂಶಯ ಬಾರದಿರಲ್ಲಿ ಎಂದು ಸಹೋದರಿ ಸಹೋದರನ ಶವದ ಎದುರು ಕುಳಿತು ಕಣ್ಣಿರು ಹಾಕಿ ನಾಟಕವಾಡಿದ್ದರು. ಪೊಲೀಸ್ ತನಿಖೆಯಲ್ಲಿ ಅನೈತಿಕ‌ ಸಂಬಂಧಕ್ಕೆ ಕೊಲೆ ಮಾಡಿರುವದನ್ನು ಆರೋಪಿಗಳು ಒಪ್ಪಿಕೊಂಡಿದ್ದು,ತನ್ನ ಕಾಮದಾಟಕ್ಕೆ ಒಡ ಹುಟ್ಟಿದ ತಮ್ಮನನ್ನೇ ಕೊಲೆ ಮಾಡಲು ಸಂಚು ರೂಪಿಸಿದ ಅಕ್ಕ ಬಸವ್ವ ಹಾಗೂ ಆಕೆಯ ಪ್ರಿಯಕರನನ್ನು ಇದೀಗ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *