ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಈಗ ಅತ್ಯಂತ ಬ್ಯುಸಿ ನಿರ್ದೇಶಕ.
ಸದ್ಯಕ್ಕೆ ಪ್ರಶಾಂತ್ ತೆಲುಗಿನಲ್ಲಿ ಎರಡು ಸಿನಿಮಾ ಮಾಡುತ್ತಿದ್ದಾರೆ. ಈ ಪೈಕಿ ಸಲಾರ್ ಚಿತ್ರೀಕರಣ ಹಂತದಲ್ಲಿದ್ದು, ಈ ವರ್ಷವೇ ಬಿಡುಗಡೆಯಾಗುವ ಸಾಧ‍್ಯತೆಯಿದೆ. ಇದಲ್ಲದೆ ಜೂ. ಎನ್ ಟಿಆರ್ ಜೊತೆಗೆ ಮೊನ್ನೆಯಷ್ಟೇ ಹೊಸ ಸಿನಿಮಾ ಘೋಷಣೆಯಾಗಿದ್ದು, ಇದು ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ. ಹೀಗಾಗಿ ಮುಂದಿನ ಎರಡು ವರ್ಷಗಳಿಗೆ ಪ್ರಶಾಂತ್ ತೆಲುಗಿನಲ್ಲೇ ಬ್ಯುಸಿಯಾಗಿರಲಿದ್ದು, ಸ್ಯಾಂಡಲ್ ವುಡ್ ಗೆ ಮರಳುವುದು ಅನುಮಾನ. ಹಾಗಿದ್ದರೂ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾದ ಕತೆ ಬರೆಯುವ ಮೂಲಕ ಸ್ಯಾಂಡಲ್ ವುಡ್ ನಂಟನ್ನು ಸಂಪೂರ್ಣವಾಗಿ ಬಿಟ್ಟಿಲ್ಲ ಎಂದು ತೋರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

