Breaking News

ಗಾಂಜಾ ಹಾವಳಿ ಇಬ್ಬರು ಪ್ರತ್ಯೇಕ ಬಂಧನ…


ಹುಬ್ಬಳ್ಳಿ: ವಾಣಿಜ್ಯ ನಗರದಲ್ಲಿ ದಿನದಿಂದ ದಿನಕ್ಕೆ ಗಾಂಜಾ ಮಾರಾಟಗಾರರ ಸಂಖ್ಯೆ ಹೆಚ್ಚುತ್ತಲೆ ಇದೆ. ಅವರನ್ನು ಮೇಟಿಹಾಕಲು ಅವಳಿ ನಗರದ ಪೋಲಿಸರ ಕಾರ್ಯಚರಣೆ ಚುರುಕುಗೊಂಡಿದೆ. ಖಾಕಿ ಪಡೆ ಗಾಂಜಾಕ್ಕೆ ಬ್ರೇಕ್ ಹಾಕಲು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸಮಾಡುತ್ತೀದ್ದಾರೆ.

ನಗರದ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಪ್ರತ್ಯೇಕವಾಗಿ ಬಂಧಿಸಿ ಅವರಿಂದ ಅಂದಾಜು 8 ಸಾವಿರ ರೂ . ಮೌಲ್ಯದ 800 ಗ್ರಾಂ ಗಾಂಜಾ , 1 ಸಾವಿರ ರೂ.ನಗದು ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ .

ಚಟ್ಟಿ ಮಠ ಕ್ರಾಸ್ ಹತ್ತಿರ ಸಾಗಾಟ ಮಾಡುತ್ತಿದ್ದ ಓರ್ವನನ್ನು ಉಪನಗರ ಪೊಲೀಸರು ಬಂಧಿಸಿ , ಆತನಿಂದ 500 ಗ್ರಾಂ ಗಾಂಜಾ , 750 ನಗದು , ಒಂದು ವಾಹನ ವಶಪಡಿಸಿಕೊಂಡಿದ್ದಾರೆ . ಓರ್ವ ಪರಾರಿಯಾಗಿದ್ದಾನೆ . ಹಳೇಹುಬ್ಬಳ್ಳಿ ಅಕ್ಕಿಪೇಟೆ ಕ್ರಾಸ್ ಹತ್ತಿರ ಸಾಗಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿ , ಆತನಿಂದ 300 ಗ್ರಾಂ ಗಾಂಜಾ , ಒಂದು ವಾಹನ ವಶಪಡಿಸಿಕೊಂಡಿದ್ದಾರೆ.

ಪೋಲಿಸ್ ಇನ್ಸ್ಪೆಕ್ಟರ್ ರವಿಚಂದ್ರ ನೇತೃತ್ವದಲ್ಲಿ ಚುರುಕುಗೊಂಡ ಕಾರ್ಯಚರಣೆ ಅವರನ್ನು ಬಂಧಿಸಲು ಯಶಸ್ವಿಯಾಗಿದೆ . PSI BSP ಅಶೋಕ್ , PSI ಉಮೇಶ್ ಗೌಡ ಪಾಟೀಲ್, ಸಿಬ್ಬಂದಿಗಳಾದ ಸುನಿಲ್ ಪಾಂಡೆ, ಮಂಜುನಾಥ ಯಕ್ಕ ಡಿ, ಮಲ್ಲಿಕಾರ್ಜುನ್ ಧನಿಗೊಂಡ, ಮಂಜುನಾಥ್ ಹಾಲವರ, ಪ್ರಕಾಶ್ ಕಲಗುಡಿ, ರೇಣಪ್ಪ ಸಿಕ್ಕಲಿಗೇರ, ರವಿ ಹೊಸಮನಿ
ಹಾಗೂ D N ಬೀರನ್ನವರ್, ಜಗದೀಶ್ ಹಟ್ಟಿ ಮುಂತಾದವರು ಗಾಂಜಾ ಮಾರಾಟಗಾರರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣಗಳು ದಾಖಲು .

Share News

About Shaikh BigTv

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *