Breaking News

ರಸ್ತೆ ಅಭಿವೃದ್ಧಿಗೆ ಬಂತು 25 ಲಕ್ಷ : ಗ್ರಾಮಸ್ಥರು ಖುಷ್ , ಕಷ್ಟ ಪರಿಹಾರ

ಕುಂದಗೋಳ : ಕಳೆದ ಐವತ್ತು ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆ ದುರಸ್ತಿಗಾಗಿ ಇಲ್ಲೊಂದು ಗ್ರಾಮದ ಗ್ರಾಮಸ್ಥರು ಕೈಗೊಂಡ ಉಪವಾಸ ಸತ್ಯಾಗ್ರಹದ ನಿರ್ಧಾರಕ್ಕೆ ಕೊನೆಗೂ ಜಯ ಸಿಕ್ಕಿದೆ . ಈಗ ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಿಂದ ಯರಿನಾರಾಯಣಪೂರಕ್ಕೆ ಸಂಪರ್ಕ ಕಲ್ಪಿಸುವ ಮೂಲಕ 3 ಕಿಲೋ ಮೀಟರ್ ರಸ್ತೆಯ ಕಥೆ ಇದು . ಅವಳಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯ ತಾಲೂಕು ಆಡಳಿತ , ಶಾಸಕ , ಸಂಸದ ಹಾಗೂ ಸಚಿವರಿಗೆ ಮನವಿ ನೀಡಿ ಕೊನೆಗೆ ಉಪವಾಸ ಸತ್ಯಾಗ್ರಹದ ನಿರ್ಧಾರ ಕೈಗೊಮಡಿದ್ದರು . ಈ ಬಗ್ಗೆ ಪಬ್ಲಿಕ್ ನೆಕ್ಸ್ ಬೆಳಕು ಚೆಲ್ಲಿ ರಸ್ತೆ ಅವ್ಯವಸ್ಥೆಯಿಂದ ಜನರು ಅನುಭವಿಸುತ್ತಿರುವ ಪರಿಸ್ಥಿತಿ ಬಗ್ಗೆ ಸತತ ವರದಿ ಪ್ರಕಟಿಸಿತ್ತು . ನಿವ ಇದೀಗ ಗ್ರಾಮಸ್ಥರ ಹೋರಾಟದ ಗುಡೇನಕಟ್ಟಿ ಯರಿನಾರಯಣಪುರಕ್ಕೆ ಜಿಲ್ಲಾ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಯಡಿ 25 ಲಕ್ಷ ರೂಪಾಯಿ ಒದಗಿದ್ದು ಗ್ರಾಮಸ್ಥರು ಅಷ್ಟೇ ಖುಷಿಯಿಂದ ಕಾಮಗಾರಿ ಆರಂಭಿಸಿದ್ದಾರೆ .

ಒಟ್ಟಾರೆ ಕೃಷಿ ಚಟುವಟಿಕೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ , ತಹಶೀಲ್ದಾರ ಕಚೇರಿ ಇತರೆ ಕೆಲಸಗಳಿಗೆ ಸಮರ್ಪಕ ರಸ್ತೆ ಇಲ್ಲದೆ ಬೇರೆ ಮಾರ್ಗದಲ್ಲಿ ತೆರಳುತ್ತಿದ್ದ ಗುಡೇನಕಟ್ಟಿ ಯರಿನಾರಣಪೂರ ಜನತೆಗೆ ಕಷ್ಟ ದೂರವಾಗಿ ರಸ್ತೆ ಕಾಮಗಾರಿ ಭರದಿಂದ ಸಾಗಿದೆ

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *