Breaking News

ಚಾಮುಲ್ ಚುನಾವಣೆ : ಅತ್ರಂತ ಫಲಿತಾಂಶ


ಚಾಮರಾಜನಗರ: ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್)ದ 9 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಾಲ್ವರು, ಬಿಜೆಪಿ ಬೆಂಬಲಿತ ಇಬ್ಬರು, ಪಕ್ಷೇತರ ಇಬ್ಬರು ಹಾಗೂ ಜೆಡಿಎಸ್ ಬೆಂಬಲಿತ ಓರ್ವರು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ನಿಂದ ನಿಕಟಪೂರ್ವ ಅಧ್ಯಕ್ಷ ಎಚ್.ಎಸ್ ನಂಜುಂಡಪ್ರಸಾದ್, ಹಾಲಿ ನಿರ್ದೇಶಕ ಎಂ. ನಂಜುಂಡಸ್ವಾಮಿ, ಶಾಹುಲ್ ಅಹಮದ್(ತೌರಿಕ್), ಶಾಸಕ ಪುಟ್ಟರಂಗಶೆಟ್ಟರ ಪುತ್ರಿ ಶೀಲಾ ಪುಟ್ಟರಂಗಶೆಟ್ಟಿ, ಬಿಜೆಪಿಯಿಂದ ಎಚ್.ಎಸ್. ಬಸವರಾಜು, ವೈ.ಸಿ. ನಾಗೇಂದ್ರ, ಬಂಡಾಯ ಬಿಜೆಪಿ ಅಭ್ಯರ್ಥಿ ಎಂ.ಪಿ. ಸುನೀಲ್, ಜೆಡಿಎಸ್‌ನಿಂದ ಮಹದೇವಸ್ವಾಮಿ( ಉದ್ದನೂರು ಪ್ರಸಾದ್) ಹಾಗೂ ಪಕ್ಷೇತರರಾಗಿ ಸದಾಶಿವಮೂರ್ತಿ ಜಯಗಳಿಸಿದ್ದಾರೆ.

ತಾಲೂಕಿನ ಕುದೇರು ಗ್ರಾಮದಲ್ಲಿರುವ ಚಾಮುಲ್‌ನ ಎಚ್.ಎಸ್.ಎಂ. ಆಡಳಿತ ಸಂಕೀರ್ಣಲ್ಲಿ ಮಂಗಳವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಿತು. ಐದೂ ತಾಲೂಕಿನ ಮತದಾರರು ಚಾಮುಲ್ ಗೆ ಆಗಮಿಸಿ ಮತ ಚಲಾಯಿಸಿದರು. ಜಿಲ್ಲೆಯ ಹಾಲಿನ ಡೇರಿಗಳ 449 ಮತದಾರರು ನಿರ್ದೇಶಕರ ಆಯ್ಕೆಗೆ ಮತದಾನ ಮಾಡಿದ್ದರು. ಸಂಜೆ 4.45ಕ್ಕೆ ಫಲಿತಾಂಶವೂ ಹೊರಬಿತ್ತು.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *