Breaking News

ಸಿಡಿಲಿಗೆ 17 ಮಂದಿ ಬಲಿ


ಬಿಹಾರ : ಸಿಡಿಲು, ಗುಡುಗು ಸಹಿತ ಬಾರೀ ಮಳೆಗೆ 17 ಮಂದಿ ಬಲಿಯಾಗಿರುವ ಘಟನೆ ಬಿಹಾರದ ಭಾಗಲ್ಪುರ್‌ , ವೈಶಾಲಿ, ಖಗಾರಿಯಾ, ಬಂಕಾ ಹಾಗೂ ಕತಿಹಾರ್‌ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದಿದೆ.ಇದೀಗ ಮೃತ ಕುಟುಂಬಕ್ಕೆ ರಾಜ್ಯ ಸರಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

ಬಿಹಾರದಲ್ಲಿ ಸುರಿದ ಭಾರೀ ಮಳೆಯ ಜೊತೆಗೆ ಸಿಡಿಲ ಆರ್ಭಟಕ್ಕೆ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿ ಹೋಗಿವೆ. ಭಾಗಲ್ಪುರ್ ಜಿಲ್ಲೆಯೊಂದರಲ್ಲಿಯೇ ಆರು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ವೈಶಾಲಿ ಜಿಲ್ಲೆಯಲ್ಲಿ ಮೂರು, ಖಗಾರಿಯಾ ಮತ್ತು ಬಂಕಾದಿಂದ ತಲಾ ಇಬ್ಬರು, ಕತಿಹಾರ್, ಸಹರ್ಸಾ, ಮಾಧೇಪುರ ಮತ್ತು ಮುಂಗೇರ್‌ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು ಬಿಹಾರದಲ್ಲಿ ಸಿಡಿಲು, ಗುಡುಗು ಸಹಿತ ಮಳೆಗೆ 17 ಮಂದಿ ಬಲಿಯಾಗಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *