Breaking News

ಮಾನಸಿಕ ಒತ್ತಡದ ನಿವಾರಣೆ- ದೈಹಿಕ ಸದೃಢತೆ ಯೋಗ ಅವಶ್ಯಕ

ಧಾರವಾಡ:ಮಾನಸಿಕ ಒತ್ತಡದ ನಿವಾರಣೆಗಾಗಿ ಹಾಗೂ ದೈಹಿಕ ಸದೃಢತೆಗಾಗಿ ಪ್ರತಿಯೊಬ್ಬರು ಪ್ರತಿನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕೆಂದು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ . ಮೀನಾಕ್ಷಿ ಅವಲೂರು ಅಭಿಪ್ರಾಯಪಟ್ಟರು.

ಅವರು ಮಹಾತಪಸ್ವಿ ಶ್ರೀ ಕುಮಾರಸ್ವಾಮೀಜಿ ಫೌಂಡೇಶನ್ ( ರಿ) ತಪೋವನ , ಧಾರವಾಡ . ಹಾಗೂ ಪರಮಹಂಸ ಯೋಗ ಪೀಠ ( ರಿ ) ಧಾರವಾಡ . ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿಗಳಾದ ಡಾ. ಗುರುಲಿಂಗ ಕಾಪಸೆ ಮಾತನಾಡಿ, ಸರ್ವ ರೋಗಕ್ಕೊ ನಮ್ಮ ಪ್ರಾಚೀನ ಕಲೆಯಲ್ಲಿ ಅದರದೆಯಾದ ಮಹತ್ವವನ್ನು ಸಾಧು-ಸಂತರು ತಿಳಿಹೇಳಿದ್ದಾರೆ ಆ ಅಭೂತಪೂರ್ವ ಕಲೆಯಲ್ಲಿ ಯೋಗವು ಒಂದಾಗಿದೆ ಇದನ್ಮು ಪ್ರತಿದಿನ ಜೀವನದ ಒಂದು ಚಟುವಟಿಕೆ ಎಂದು ಎಲ್ಲರೂ ಸ್ವೀಕರಿಸಬೇಕೆಂದರು.

ಸಾನ್ನಿಧ್ಯವನ್ನು ಹಾವೇರಿ ಜಿಲ್ಲೆಯ ಅಗಡಿಯ ಗ್ರಾಮದ ಸುಕ್ಷೇತ್ರ ಅಕ್ಕಿಮಠ ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಗುರುಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಯೋಗಪಟು ಸಾವಿರಾರು ಯೋಗ ಶಿಬಿರಗಳನ್ನು ನಡೆಸಿದ ಯೋಗ ಪಟುಗಳಾದ ಹಾಗೂ ಧಾರವಾಡ ಯೋಗ ಪೋಷಕರೆಂದೆ ಹೆಸರುವಾಸಿಯಾದ ತಾ.ಭ. ಚವ್ಹಾಣ ಸೇರಿದಂತೆ ಇನ್ನಿತರರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು . ಕಾರ್ಯಕ್ರಮದಲ್ಲಿ ತಪೋವನ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಗಳಾದ ಕಾಶೀನಾಥ ಹಾದಿಮನಿ ಉಪಸ್ಥಿತರಿದ್ದರು. ನಂತರ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದ ಪರಮಹಂಸ ಯೋಗಪೀಠದ ಯೋಗಾಭ್ಯಾಸಿಗಳಾದ ಡಾ . ಶೋಭಾ ಹೂಲಿಕಟ್ಟಿ ಅವರಿಂದ ವಿಶೇಷ ಸಾಮೂಹಿಕ ಯೋಗಪದರ್ಶನ ನಡೆಯಿತು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *