ಬೆಂಗಳೂರು: ತಾಕತ್ ಇದ್ರೆ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿ ಎಂಬುದಾಗಿ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸವಾಲ್ ಹಾಕಿದ್ದಾರೆ.
ಇಂದು ಜೆಡಿಎಸ್ ಕಚೇರಿ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜಣ್ಣ ಕ್ಷಮೆ ಕೇಳ್ತಾರೆ ಅನ್ಕೊಂಡೆ. ಆದರೆ ಇಂದು ಉಲ್ಟಾ ಮಾತಾಡಿದ್ದಾರೆ. ಸಿದ್ದರಾಮಯ್ಯ ಉತ್ಸವ ಹಾಳ್ ಮಾಡಲು ಹೀಗೆ ಮಾತನಾಡಿದ್ರು ಅಂತಾರೆ. ಜನತಾದಳ ಅಸ್ತಿತ್ವದಲ್ಲಿ ಇಲ್ಲ ಅಂತಾರೆ. ಅಂದ್ಮೇಲೆ ಜೆಡಿಎಸ್ ಪಕ್ಷದ ಮೇಲೆ ಯಾಕೆ ಭಯ..? ಎಂದರು.
ಶಿವಕುಮಾರ್ ಹಾಗೂ ಸುರೇಶ್ ರಾಜಣ್ಣ ಬಗ್ಗೆ ಏನ್ ಹೇಳಿದ್ದಾರೆ. ಅವರೆಲ್ಲಾ ನಿಮ್ಮ ಸಿದ್ದರಾಮಯ್ಯ ಸಭೆ ಹಾಳ್ ಮಾಡೋಕೆ ಹೇಳಿದ್ರಾ..? ನಾವು ಮಾಡಿದ್ರೆ ಬಿ ಟೀಮ್.. ನೀವು ಮಾಡಿದ್ರೆ ಬಿ.ಟೀಮ್ ಅಲ್ಲ. ನಾವು ದೇವೇಗೌಡರು ಜನತಾದಾಳ ಸ್ವತ್ತಲ್ಲ. ದೇವೇಗೌಡರು ಇಡೀ ದೇಶದ ಸ್ವತ್ತು. ವೇಣುಗೋಪಾಲ್ ಗೂ ಗೊತ್ತು ದೇವೇಗೌಡರ ಬಗ್ಗೆ. ಇದನ್ನು ಎಳೆದುಕೊಂಡು ಹೋಗೋದು ಬೇಡ. ಅಂದು ಸಿದ್ದರಾಮಯ್ಯಗೆ ಡೆಪ್ಯೂಟಿ ಸಿಎಂ ಸಿಎಂ ಮಾಡಿದ್ದು ಯಾರು..? ನನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಮಾಡಿದ್ದು ಯಾರು..? ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





