ಹುಬ್ಬಳ್ಳಿ : ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ ಹಿನ್ನಲೆ ಹುಬ್ಬಳ್ಳಿಯಲ್ಲಿ ಇಂದು ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆ ಹಿನ್ನೆಲೆ ಕಿಮ್ಸ್ ನ ಶವಾಗಾರದ ಬಳಿ ಸಂಬಂಧಿಗಳ ಆಗಮಿಸಿದ್ದಾರೆ.
ಶಿವಮೊಗ್ಗ ಹಾಗೂ ಬೆಂಗಳೂರು ಸೇರಿದಂತೆ ಹಲವು ಭಾಗದಿಂದ ಸಂಬಂಧಿಗಳ ಬರಲಿದ್ದಾರೆ.ಗುರೂಜಿ ಅವರನ್ನ ಹತ್ಯೆ ಮಾಡಿರುವುದು ದೊಡ್ಡ ದುರಂತ. ಅವರ ಉದ್ಯೋಗಿಗಳೇ ಅವರನ್ನ ಹತ್ಯೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ . ದುಷ್ಕರ್ಮಿಗಳು ಉಂಡ ಮನೆಗೆ ಕನ್ನ ಹಾಕಿದ್ದಾರೆ.ಸಾವಿರಾರು ಕುಟುಂಬಗಳಿಗೆ ಗುರೂಜಿ ದಾರಿದೀಪವಾಗಿದ್ದರು. ನಮ್ಮ ಜೊತೆ ಸಾಕಷ್ಟು ಅವಿನಾಭಾವ ಒಡನಾಟ ಹೊಂದಿದ್ದರು .ಅವರನ್ನ ಹತ್ಯೆ ಮಾಡಿರುವುದು ದೊಡ್ಡ ದುರಂತ. ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಗುರೂಜಿ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





