ಹುಬ್ಬಳ್ಳಿ: ಅವಳಿ ನಗರದಲ್ಲಿ ದಿನ ನಿತ್ಯ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ಜನರು ಭಯ ಭೀತರಾಗಿದ್ದಾರೆ. ಹುಟ್ಟು ಹಬ್ಬದ ಆಚರಣೆಗೆ ಬರದ ಕಾರಣ ಸಹೋದರರ ಇಬ್ಬರ ಮೇಲೆ ಕುಡಿದ ಅಮಲಿನಲ್ಲಿದ್ದ ತಂಡವೊಂದು ಹಲ್ಲೆ ಮಾಡಿರೋ ಘಟನೆ ನಗರದಲ್ಲಿ ನಡೆದಿದೆ.
ಪರಶರಾಮ ಹಲ್ಲೆಗೆ ಒಳಗಾದ ವ್ಯಕ್ತಿ. ವೈಯಕ್ತಿಕ ಕಾರಣಗಳಿಂದ ಬರ್ತಡೆಗೆ ಹೋಗದ ಕಾರಣ ಪೋನ್ ಮಾಡಿ ಒತ್ತಾಯಮಾಡಿದ್ದಾರೆ. 5 ರಿಂದ 6 ಜನ ಸೇರಿ ಸಹೋದರರ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲು, ಬೊಂಬುಗಳಿಂದ ಹಲ್ಲೆ ಮಾಡಿದ್ದಾರೆ. ಹಳೇ ಹುಬ್ಬಳ್ಳಿಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





