Breaking News

ಕಸ ಸಂಗ್ರಹಿಸುವ ವಾಹನ ಹಾಗೂ ಕಸ ಸಂಗ್ರಹಿಸುವ ಬುಟ್ಟಿ ವಿತರಣೆ

ಕುಂದಗೋಳ: ಪಟ್ಟಣ ಪಂಚಾಯತ ಆವರಣದಲ್ಲಿ ಒಟ್ಟು 8050 ಸಾವಿರ ಬುಟ್ಟಿ ಹಾಗೂ 7 ಲಕ್ಷ 50 ಸಾವಿರ 15 ನೇ ಹಣಕಾಸು ಅಡಿಯಲ್ಲಿ 1 ಕಸ ಸಂಗ್ರಹಿಸುವ ವಾಹನ ವಿತರಣೆಯನ್ನು ಶಾಸಕಿ ಕುಸುಮಾವತಿ ಚ ಶಿವಳ್ಳಿ ಸಾಂಕೇತಿಕವಾಗಿ 10 ಫಲಾನುಭವಿಗಳಿಗೆ ನೀಡುವ ಮೂಲಕ ನೀಡಿದರು.

ನಂತರ ಮಾತನಾಡಿದ ಅವರು ಸಾರ್ವಜನಿಕರು ಪ್ಲಾಸ್ಟಿಕ,ಕಸ ಕಡ್ಡಿ ವಿಂಗಡಣೆ ಮಾಡಿ ಸ್ವಚ್ಛತೆಯನ್ನು ಕಾಪಾಡಲು ಪ್ರತಿ ಮನೆಗೆ 2 ಬುಟ್ಟಿ ವಿತರಿಸಿದ್ದೇವೆ, ಹಾಗೂ ಕಸ ಸಂಗ್ರಹಿಸಲು ವಾಹನ ವಿತರಿಸಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಗಣೇಶ ಕೋಕಾಟೆ ಮಾತನಾಡಿ ಸರ್ಕಾರದ ಪ್ರತಿಯೊಂದ ಸೌಲಭ್ಯ ತಲುಪಿಸುವುದ ನಮ್ಮ ಗುರಿಯಾಗಿದೆ ಅದರ ಸದುಪಯೋಗವನ್ನು ನಗರದ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ನಾರಾಯಣ ಡೊಂಬರ,ಉಪಾಧ್ಯಕ್ಷ ಹನಮಂತ ರಣತುರ,ವಾಗೇಶ ಗಂಗಾಯಿ,ಹನುಮಂತ ಮೇಲಿನಮನಿ.ದಿಲೀಪ್ ಕಲಾಲ, ಸರ್ತಾಜ ಬೇಗಂ ಮುಲ್ಲಾ,ನೀಲಮ್ಮ ಕುಂದಗೋಳ ಮಲಿಕ ಶಿರೂರ,ಬಸಪ್ಪ ತಳವಾರ,ಹನುಮವ್ವ ಕೋರಿ,ಗಂಗಮ್ಮ ಬಂಡಿವಾದ, ಸುನಿತಾ ಪಾಟೀಲ,ಮುತ್ತು ಕೊಪ್ಪದ ಸೇರಿದಂತೆ ಕೆ.ಎಸ್ ಪಾಟೀಲ ಮತ್ತಿತ್ತರು ಉಪಸ್ಥಿತರಿದ್ದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *