ನವಲಗುಂದ : ಇಂದು ರೈತ ಹುತಾತ್ಮ ದಿನದ ಅಂಗವಾಗಿ ನವಲಗುಂದದಲ್ಲಿರುವ ರೈತ ಬಂಡಾಯದಲ್ಲಿ ಪ್ರಾಣತೆತ್ತ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವಾರ್ಪಣೆ ಸಲ್ಲಿಸಲಾಯಿತು. ಇದೇ ಸಂದರ್ಬದಲ್ಲಿ ರೈತ ವಿರೋಧಿ ಕಾಯ್ದೆಗಳು ವಾಪಸ್ಸಾತಿಗಾಗಿ, ಕೂಡಲೇ ಮಹದಾಯಿ ನೀರು ಮಲಪ್ರಭೆಗೆ ಹರಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡ ಬಿ.ಎಸ್.ಸೊಪ್ಪಿನ, ಮಹಾದಾಯಿ ಹೋರಾಟಗಾರ ಅಮೃತ ಇಜಾರಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ರೈತ ವೇದಿಕೆಯ ಸಿದ್ದಪ್ಪ ಮುಪ್ಪಯ್ಯನವರ, ಸುಭಾಸಚಂದ್ರಗೌಡ ಪಾಟೀಲ, ಬಿ.ಐ.ಈಳಿಗೇರ, ಹಾಮಾಲಿ ಸಂಘದ ಅಧ್ಯಕ್ಷ ಸಂಗಪ್ಪ ಹುಬ್ಬಳ್ಳಿ, ಶರೀಫ್ ಬಿಂಕದಕಟ್ಟಿ, ರಮೇಶ ಹೊಸಮನಿ, ರಂಗ ಕಲಾವಿದ ಚಂದ್ರಶೇಖರ ಕಿಲ್ಲೇದಾರ ಮುಂತದವರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





