ಧಾರವಾಡ: ಟಂಟಂ ವಾಹನ ತೊಳೆಯಲು ಹೋಗಿ ತಂದೆ ಮಗ ನೀರು ಪಾಲಾದ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ…ಗ್ರಾಮದ ನವೋದಯ ಶಾಲೆಯ ಪಕ್ಕದ ಕೆರೆಯಲ್ಲಿ ಈ ಒಂದು ಘಟನೆ ಸಂಭವಿಸಿದೆ…
ಗದಿಗೆಪ್ಪ ಅಂಗಡಿ ಹಾಗೂ ರವಿ ಅಂಗಡಿ ಸಾವನ್ನಪ್ಪಿದ ತಂದೆ ಮಗನಾಗಿದ್ದು, ಬೆಳಿಗ್ಗೆ ಕೆರೆಗೆ ಟಂಟಂ ವಾಹನ ತೊಳೆಯಲು ಕೆರೆಗೆ ಇಳಿದಾಗ ದುರ್ಘಟನೆ ನಡೆದಿದೆ. ಈ ವೇಳೆ ಜಾರಿ ಕೆರೆಗಿಳಿದಾಗ ನೀರು ಪಾಲಾಗಿದ್ದಾರೆ…
ತಂದೆ ಗದಿಗೆಪ್ಪ ಶವ ಪತ್ತೆಯಾಗಿದ್ದು, ರವಿ ಶವಕ್ಕಾಗಿ ಹುಡುಕಾಟ ನಡೆಸಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





