Warning: Undefined array key "wpdb" in /home/eamphica/public_html/wp-content/mu-plugins/lumen-plugin.php on line 5616
ಗೂಡ್ಸ್ ರೈಲಿನ ಒಂದು ಬೋಗಿ ಹಳಿ ತಪ್ಪಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ – bigtvnews | Hubli Dharwad News | Kannada News | Karnataka News
Breaking News

ಗೂಡ್ಸ್ ರೈಲಿನ ಒಂದು ಬೋಗಿ ಹಳಿ ತಪ್ಪಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಹುಬ್ಬಳ್ಳಿ: ವಾಸ್ಕೋಡ್ ಗಾಮಾ – ಲೋಂಡಾ ವಿಭಾಗದ ದೂಧ್​ಸಾಗರ್ – ಸೊನೌಲಿಂ ನಿಲ್ದಾಣದ ನಡುವೆ ಗುರುವಾರ ರಾತ್ರಿ 9.15ರ ಸುಮಾರಿಗೆ ಗೂಡ್ಸ್‌ ರೈಲಿನ ಒಂದು ಬೋಗಿ ಹಳಿ ತಪ್ಪಿದ ಘಟನೆ ಸಂಭವಿಸಿದೆ. ವಿಷಯ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹುಬ್ಬಳ್ಳಿಯ ವಿಪತ್ತು ನಿರ್ವಹಣೆ ಕೊಠಡಿಯಿಂದ ಪರಿಸ್ಥಿತಿ ನಿಭಾಯಿಸುತ್ತಿದೆ. ಲೈನ್ ಮರುಜೋಡಣೆಗಾಗಿ ಕ್ಯಾಸಲ್‌ರಾಕ್ ಸ್ಟೇಷನ್ ಮತ್ತು ವಾಸ್ಕೋಡ್-ಗಾಮಾ ನಿಲ್ದಾಣದಿಂದ ಉಪಕರಣಗಳು ಮತ್ತು ಸಾಮಗ್ರಿಗಳೊಂದಿಗೆ ಇಂಜಿನಿಯರಿಂಗ್ ತಂಡ ಸ್ಥಳಕ್ಕೆ ತೆರಳಿದೆ.ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪ್ರಯಾಣಿಕರಿಗೆ ಸಾಧ್ಯ ಇರುವ ಎಲ್ಲ ನೆರವು ನೀಡಲಾಗುವುದು. ಪ್ರಯಾಣಿಕರು ಸಹಕಾರ ನೀಡಬೇಕು ಎಂದು ರೈಲ್ವೆ ಅಧಿಕಾರಿಗಳು ಕೋರಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *