ಹುಬ್ಬಳ್ಳಿ : ಇಡೀ ರಾಜ್ಯದಲ್ಲಿಯೇ ಮಾದರಿಯಾದ ಲಾ ರಿಸರ್ಚರ್ ಆ್ಯಂಡ್ ಸ್ಟಡಿ ಸೆಂಟರ್‌ನ್ನು ರೆಡಿ ಮಾಡಿದ್ದುಹುಬ್ಬಳ್ಳಿ ವಕೀಲರ ಸಂಘ ವಕೀಲರು, ವಿದ್ಯಾರ್ಥಿಗಳು ಸೇರಿ ಕಾನೂನು ಜ್ಞಾನದ ಹಸಿವುಳ್ಳ ಎಲ್ಲರಿಗೂ ಇದು ಬಹು ಉಪಯುಕ್ತ ಲವಾದ ಕೇಂದ್ರವಾಗಲಿದೆ. ಕಾನೂನು ಅರಿಯಬೇಕು, ಸಂಶೋಧನೆ ಮಾಡುವವರಿಗೆ ಇಂಥದೊಂದು ಪುಸ್ತಕ ಸಿಗುತ್ತಿಲ್ಲ ಎಂಬ ಬೇಸರ ಆಗಬಾರದು ಎಂಬ ಆಶಯದಲ್ಲಿ ಈ ಸೆಂಟರ್ ತಲೆ ಎತ್ತಿದೆ. 150 ವರ್ಷಗಳ ಹಿಂದಿನ ಪುಸ್ತಕದಿಂದ ಹಿಡಿದು ತಿಂಗಳು ಪ್ರಕಟವಾಗುವ ಜರ್ನಲ್‌ಗಳು ಕೂಡ ಇಲ್ಲಿ ಲಭ್ಯ. ಹುಬ್ಬಳ್ಳಿ ನ್ಯಾಯಾಲಯಗಳ ಸಂಕಿರ್ಣದಲ್ಲಿರುವ ವಕೀಲರ ಸಂಘದ 2ನೇ ಮಹಡಿಯಲ್ಲಿ ಈ ಸೆಂಟರ್ ಆರಂಭವಾಗಿದೆ. ಆ. 6ರಂದು ವಿದ್ಯುಕ್ತ ಚಾಲನೆ ಸಿಗಲಿದೆ.
ರಿಸಚ್‌ರ್ ಸೆಂಟರ್‌ಗೆ ನ್ಯಾಯಾಧೀಶರು, ವಕೀಲರಿಂದ ಪುಸ್ತಕವನ್ನು ದೇಣಿಗೆ ರೂಪದಲ್ಲಿ ಪಡೆದಿರುವುದು ವಿಶೇಷ. ಕಳೆದ ಫೆಬ್ರವರಿ ತಿಂಗಳಿಂದಲೆ ಇದಕ್ಕಾಗಿ ವಕೀಲರ ಸಂಘ ಅಭಿಯಾನ ನಡೆಸಿತ್ತು. ಹಣ ಬೇಡ, ಒಬ್ಬೊಬ್ಬರಿಂದ ಒಂದು ಪುಸ್ತಕ ನಿರೀಕ್ಷಿಸುತ್ತೇವೆ ಎಂದು ಘೋಷಣೆ ಹೊರಡಿಸಲಾಗಿತ್ತು. ಈವರೆಗೆ ಸುಪ್ರೀಂ ಕೋರ್ಚ್, ಹೈಕೋರ್ಚ್ ವಕೀಲರು, ನ್ಯಾಯಾಧಿಶರು, ನಿವೃತ್ತರು ಸೇರಿ 430ಕ್ಕೂ ಹೆಚ್ಚಿನವರು ಪುಸ್ತಕ ದಾನ ಮಾಡಿದ್ದಾರೆ. ಬರೋಬ್ಬರಿ .25ಲಕ್ಷ ಮೌಲ್ಯಕ್ಕೂ ಅಧಿಕ ಕಾನೂನು ಗ್ರಂಥಗಳು ಸಂಗ್ರಹವಾಗಿವೆ. .100 ನ ಒಂದು ಪುಸ್ತಕದಿಂದ ಹಿಡಿದು .3.70ಲಕ್ಷ ಮೌಲ್ಯದ 34 ಪುಸ್ತಕಗಳ ಸೆಟ್‌ನ್ನು ದೇಣಿಗೆ ನೀಡಿದವರಿದ್ದಾರೆ. ಪರಿಣಾಮ ಲಕ್ಷಾಂತರ ಕಾನೂನು ಕೃತಿಗಳು ಇಲ್ಲಿ ಸಂಗ್ರವಾಗಿವೆ.
‘ಸಿವಿಲ್, ಕ್ರಿಮಿನಲ್, ಗ್ರಾಹಕ, ಬ್ಯಾಂಕ್, ಕಂಪನಿ ಕಾನೂನು ಸೇರಿ ಹತ್ತಾರು ವಿಧದ ಪುಸ್ತಕಗಳು ಸಂಗ್ರಹವಾಗಿವೆ. ಸಿ.ಸಿ.ಯಲ್ಲಟ್ಟಿಅವರು ನೀಡಿರುವ ಧಾರ್ಮಿಕ ಕಾನೂನುಗಳ ಕೃತಿಗಳು ರಾಜ್ಯದಲ್ಲೇ ತೀರಾ ಅಪರೂಪದ ಕೃತಿ ಎನಿಸಿದೆ. ರಾಜ್ಯದಲ್ಲಿ ಯಾವ ಬಾರ್ ಕೂಡ ತರಿಸದಷ್ಟು21 ಜರ್ನಲ್‌ಗಳನ್ನು ಹುಬ್ಬಳ್ಳಿ ವಕೀಲರ ಸಂಘ ತರಿಸಿ ಸಂಗ್ರಹಿಸಿದೆ. ಎಐಆರ್, ಎಸಿಜೆ, ಟಿಎಸಿ, ಸಿಆರ್‌ಆರ್, ಕೆಎಲ್‌ಆರ್, ಎಸ್‌ಎಆರ್ ಜರ್ನಲ್‌ಗಳು ಇದರಲ್ಲಿ ಸೇರಿವೆ. ಹುಬ್ಬಳ್ಳಿ ಹಳೇ ನ್ಯಾಯಾಲಯ ಕಟ್ಟಡದಲ್ಲಿಯೂ ಕೂಡ ಆಗಿನ ಲೈಬ್ರರಿ ಇದ್ದು, ಬ್ರಿಟಿಷ್ ಕಾಲದ ಕಾನೂನು ಪುಸ್ತಕಗಳಿವೆ’ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ತಿಳಿಸಿದರು.
ಪುಸ್ತಕ ಮಾತ್ರವಲ್ಲ, ಡಿಜಿಟಲ್ ಲೈಬ್ರರಿ ಕೂಡ ಇಲ್ಲಿದೆ. ಮಾಜಿ ಮುಖ್ಯಮಂತ್ರಿ, ಸಂಘದ ಸದಸ್ಯರಾಗಿರುವ ಜಗದೀಶ ಶೆಟ್ಟರ್ ಡಿಜಿಟಲ್ ಲೈಬ್ರರಿಗೆ ತಮ್ಮ ಅನುದಾನ ನೀಡಿದ್ದಾರೆ. 10ಕಂಪ್ಯೂಟರ್, ಪ್ರಿಂಟರ್, ಪ್ರೊಜೆಕ್ಟರ್ ಸೇರಿ ಡಿಜಿಟಲ್ ಗ್ರಂಥಾಲಯಕ್ಕೆ ಅಗತ್ಯವಿದ್ದ ಇತರ ಪರಿಕರ ನೀಡಿದ್ದಾರೆ. ಮನುಸೂತ್ರ, ಎಐಆರ್, ಕೆಎಲ್‌ಜೆ, ಎಸ್‌ಸಿಸಿ, ಲಾ ಸ್ಯೂಟ್ ಪೋರ್ಟಲ್‌ಗಳಿಗೆ ವಾರ್ಷಿಕ ಚಂದಾದಾರಿಕೆಯನ್ನು ಸಂಘ ಪಡೆದಿದೆ. .15ಲಕ್ಷ ಅನುದಾನದಲ್ಲಿ ಈ ಕೇಂದ್ರ ಸ್ಥಾಪನೆಯಾಗಿದೆ.
ಕೇವಲ ಹುಬ್ಬಳ್ಳಿ ವಕೀಲರ ಸಂಘಕ್ಕೆ ಮಾತ್ರ ಲಾ ರಿಸಚ್‌ರ್ ಆ್ಯಂಡ್ ಸ್ಟಡಿ ಸೆಂಟರ್ ಸೀಮಿತವಾಗಿಲ್ಲ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸೇರಿ ರಾಜ್ಯದ 106 ಕಾನೂನು ಕಾಲೇಜು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.
bigtvnews | Hubli Dharwad News | Kannada News | Karnataka News Hubli News | News In Hubli | Local news





