Breaking News

ರವಿ ಬೋಪಣ್ಣ ಸಿನಿಮಾ ಈ ವಾರ ಬಿಡುಗಡೆ


ಕ್ರೇಜಿಸ್ಟಾರ್‌ ವಿ. ರವಿಚಂದ್ರನ್‌ ನಟನೆ ಮತ್ತು ನಿರ್ದೇಶನದ “ರವಿ ಬೋಪಣ್ಣ’ ಸಿನಿಮಾ ಈ ವಾರ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ “ರವಿ ಬೋಪಣ್ಣ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಬರೋಬ್ಬರಿ 7 ನಿಮಿಷ ಅವಧಿಯ ಟ್ರೇಲರ್‌ನಲ್ಲಿ, ರವಿಚಂದ್ರನ್‌ ಮೂರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕಿಯರಾಗಿ ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ ಗ್ಲಾಮರಸ್‌ ಆಗಿ ತೆರೆಮೇಲೆ ಮಿಂಚಿದ್ದು, ನಟ ಕಿಚ್ಚ ಸುದೀಪ್‌ ಕೂಡ ಚಿತ್ರದಲ್ಲಿ ಕರಿಕೋಟು ತೊಟ್ಟು ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ಖಡಕ್‌ ಡೈಲಾಗ್ಸ್‌, ಎಮೋಶನ್‌ ದೃಶ್ಯಗಳು, ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಶೈಲಿಯ ಕಥೆ ಹೀಗೆ ಒಂದಷ್ಟು ಝಲಕ್‌ “ರವಿ ಬೋಪಣ್ಣ’ನ ಟ್ರೇಲರ್‌ನಲ್ಲಿ ಕಾಣುತ್ತದೆ.

ಇನ್ನು “ರವಿ ಬೋಪಣ್ಣ’ ಸಿನಿಮಾದ ಬಿಡುಗಡೆಗೂ ಮೊದಲು ಮಾತನಾಡಿರುವ ರವಿಚಂದ್ರನ್‌, ತಮ್ಮ ಸಿನಿಮಾದ ಬಿಡುಗಡೆಯ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ, “ಈ ಸಿನಿಮಾದಲ್ಲಿ ಗ್ಲಾಮರ್‌ ಇದೆ. ಆದ್ರೆ ಗ್ರಾಮರ್‌ ಇಲ್ಲ. ಫ್ಯಾಮಿಲಿ, ಎಮೋಶನ್ಸ್‌, ವ್ಯವಸ್ಥೆ, ಸ್ಕ್ಯಾಮ್ಸ್, ಆಯಕ್ಷನ್‌, ಕಾಮಿಡಿ, ಮ್ಯಾಜಿಕ್‌, ಭ್ರಮೆ ಎಲ್ಲವನ್ನೂ ಸ್ಕ್ರೀನ್‌ ಮೇಲೆ ನೋಡಬಹುದು. ಯಾವಾಗಲೂ ನಮ್ಮೊಳಗೆ ಒಬ್ಬ ಇರುತ್ತಾನೆ. ಅವನು ನಮ್ಮನ್ನು ನೋಡಿ ನಗುತ್ತಿರುತ್ತಾನೆ. ಅವನನ್ನು ಈ ಸಿನಿಮಾದಲ್ಲಿ ಸ್ಕ್ರೀನ್‌ ಮೇಲೆ ತಂದಿದ್ದೀನಿ’ ಎನ್ನುತ್ತಾರೆ ರವಿಚಂದ್ರನ್‌.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *