Breaking News

ಹುಬ್ಬಳ್ಳಿಯ ನಗರಾಭಿವೃದ್ಧಿ ಮಾಜಿ ಅಧ್ಯಕ್ಷನ ಮಗ, ರಸ್ತೆ ಅಪಘಾತದಲ್ಲಿ ಸಾವು..!

ಹುಬ್ಬಳ್ಳಿ; ನಗರದ ಹೊರ ಹೊಲಯದ ತಾರಿಹಾಲ್ ಬೈಪಾಸ್ ಹತ್ತಿರ ಟ್ಯಾಂಕರ್ ವೊಂದಕ್ಕೆ ಬೈಕ್ ಹಿಂಬದಿ ಇಂದ ಡಿಕ್ಕಿ ಆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಡರಾತ್ರಿ ನಡೆದಿದೆ.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಸಂಸ್ಥೆ ಮಾಜಿ ಅಧ್ಯಕ್ಷ ನಾಗೇಶ ಕಲಬುರಗಿ ಅವರ ಮೂರನೆಯ ಪುತ್ರ ತಿಲಕ್ ಕಲಬುರಗಿ( ೧೯) ಎಂದು ಗುರುತಿಸಲಾಗಿದೆ.

ತಿಲಕ್ ಹಾಗು ನಾರಾಯಣ ಇವರು ಪ್ರತಿ ಶನಿವಾರ ನುಗ್ಗಿಕೇರಿ ಹನುಮಂತ ದೇವಸ್ಥಾನಕ್ಕೆ ಹೋಗುತಿದ್ದು ಆದ್ರೆ ಈ ಶನಿವಾರ ಅನಿವಾರ್ಯ ಕಾರಣದಿಂದ ಹೊಗಲಿಕ್ಕೆ ಆಗಲಿಲ್ಲಾ ಆದರಿಂದ ರವಿವಾರ ತನ್ನ ಗೆಳೆಯನ ಜೊತೆ ಬೈಕನಲ್ಲಿ ಹೋಗುತಿದ್ದಾಗ ಎದುರಿಗೆ ಚಲುಸಿತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೆ ಇಬ್ಬಾಗ ವಾಗಿ ಮೃತಪಟ್ಟರೆ ಆತನ ಗೆಳೆಯ ನಾರಾಯಣ ದೊಂಗಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಚಿಂತಾಜನಕ ವಾಗಿದೆ ಇನ್ನು ತಿಲಕ ಮೃತ ದೇಹವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕುರಿತು ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಬಿಸಿದ್ದಾರೆ ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *