Breaking News

ಹಾಡು ಹಚ್ಚಬೇಡ ಎಂದಿದ್ದಕ್ಕೆ ಬಿಯರ್ ಬಾಟಲ್ನಿಂದ ಹಲ್ಲೆ . !

ಹುಬ್ಬಳ್ಳಿ : ಬರ್ತ್‌ಡೇ ಸಂದರ್ಭದಲ್ಲಿ ಹಾಡು ಹಚ್ಚುವ ವಿಚಾರಕ್ಕೆ ವ್ಯಕ್ತಿ ಓರ್ವನಿಗೆ ಬಿಯರ್ ಬಾಟಲ್‌ನಿಂದ ಹೊಡೆದು ಕೊಲೆಗೆ ಯತ್ನಿಸಿದ ಪ್ರಕರಣ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .

ಹಳೇ ಹುಬ್ಬಳ್ಳಿಯ ನಿವಾಸಿ ಅಭಿಷೇಕ ಭಜಂತ್ರಿ ಹಲ್ಲೆಗೊಳಗಾದ ವ್ಯಕ್ತಿ . ಹಳೇ ಹುಬ್ಬಳ್ಳಿಯ ನಾಗರಾಜ ವಾಲ್ಮೀಕಿ ಹಾಗೂ ಆಕಾಶ ವಾಲ್ಮೀಕಿ ಹಲ್ಲೆ ನಡೆಸಿದವರು . ನಾಗರಾಜ ಜನ್ಮದಿನ ಪಾರ್ಟಿ ಸಮಯದಲ್ಲಿ ಅಭಿಷೇಕ್ ಹಾಡು ಯಾಕೇ ಹಾಕುತ್ತಿಯಾ ಎಂದು ಕೇಳಿದ್ದಾನೆ .

ಇದಕ್ಕೆ ಕೋಪಗೊಂಡ ನಾಗರಾಜ ವಾಲ್ಮೀಕಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ . ಅಷ್ಟೇ ಅಲ್ಲದೆ ಅವನ ಸಹೋದರ ಆಕಾಶ ಜೊತೆ ಸೇರಿ ಅಭಿಷೇಕ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *