Breaking News

ಅಂಜಲಿ ‌ಕೊಲೆ ಪ್ರಕರಣ: ನನಗೆ ಚಾಕು ಹಾಕಿದಾತ ಈತನೇ ಎಂದು ಗುರುತಿಸಿದ ಗದಗ‌ ಮೂಲದ ಲಕ್ಷ್ಮಿ..

ಹುಬ್ಬಳ್ಳಿ‌ ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ‌ ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.‌ ನಗರದ ಪ್ರವಾಸಿ ಮಂದಿರಲ್ಲಿ ಇಡೀ‌ ದಿನ ಆರೋಪಿ ಗಿರೀಶ್ ಗೆ ಡ್ರೀಲ್ ಮಾಡಿದ ಸಿಐಡಿ‌ ಅಧಿಕಾರಿಗಳು ದಾವಣಗೆರೆಯಲ್ಲಿ ಚಾಕು ಇರಿತಕೊಳ್ಳಗಾದ ಮಹಿಳೆ ಹಾಗೂ ಆರೋಪಿಯನ್ನು ಮುಖಾಮುಖಿಯಾಗಿ ಮಾಹಿತಿ ಕಲೆ ಹಾಕಿದರು.ಚಾಕು ಇರಿತಕ್ಕೆ ಒಳಗಾದ ಲಕ್ಷ್ಮೀಯನ್ನು ಐಬಿಗೆ ಕರೆಸಿಕೊಂಡ ಸಿಐಡಿ ಅಧಿಕಾರಿಗಳು ಹಂತಕನ ಮುಂದೆಯೇ ಘಟನೆ ವಿವರಣೆ ಕೇಳಿದರು. ರೈಲಿನಲ್ಲಿ ಚಾಕುವಿನಿಂದ ಅಟ್ಯಾಕ್ ಮಾಡಿದ್ದ ಆರೋಪಿ ಇವನೇನಾ ಎಂದರು.ಅದಕ್ಕೆ ನಾನಾ ಹೌದು ಎಂದು ಒಪ್ಪಿಕೊಂಡಿದ್ದಾರೆ. ಸಿಐಡಿ ವಿಚಾರಣೆ ಬಳಿಕ ಮಾಹಿತಿ‌ ನೀಡಿದ ಲಕ್ಷ್ಮಿ ಅವರು ಮಾಧ್ಯಮಗಳಿಗೆ ಮಾಹಿತಿ‌ ನೀಡಿ, ನನ್ನ ಮಗನ ಹಾಸ್ಟೆಲ್ ಅಡ್ಮಿಶೇನ್ ತುಮಕುರಿಗೆ ಹೋಗಿದ್ದೇವೆ. ಟ್ರೈನಲ್ಲಿ ಬರುವಾಗ ದಾವಣಗೆರೆ ಬಳಿ ಹಂತಕ ಗಿರೀಶನಿಂದ ಚಾಕುವಿನಿಂದ ಇರಿದಿದ್ದ. ಇಂದು ನಮ್ಮನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ಕರೆದಿದ್ದರು. ಈ ವೇಳೆ ಆರೋಪಿ ಮುಂದೆ ನಿಲ್ಲಿಸಿ ಕೆಲವು ಪ್ರಶ್ನೆ ಕೇಳಿದರು. ರೈಲಿನಲ್ಲಿ ಚಾಕುವಿನಿಂದ ಅಟ್ಯಾಕ್ ಮಾಡಿದ್ದ ಆರೋಪಿ ಇವನೇನಾ ಎಂದರು. ಅದಕ್ಕೆ ನಾನಾ ಎಂದು ಹೇಳಿದೆ.ನನ್ನ ಮಗನ

ಹಾಸ್ಟೆಲ್ ಅಡ್ಮಿಶೇನ್ ತುಮಕುರುಗೆ ತೆರಳಿದ್ವಿ. ಮರಳಿ ಬರುವ ಸಂದರ್ಭದಲ್ಲಿ ಇತ ನಾವಿರೋ ಟ್ರೈನಲ್ಲಿ ಇದ್ದ. ನನ್ನೇ ದಿಟ್ಟಿಸಿ ನೋಡುತ್ತಿದ್ದಾ, ವಾಶ್ರೂಮಗೆ ತೆರಳಿದಾಗ ಫಾಲೋ ಮಾಡಿ ಬಂದಿದ್ದ. ನನ್ನನ್ನು ಯಾಕೆ ಫಾಲೋ ಮಾಡತ್ತಿದ್ದೀತಾ ಎಂದು ಪ್ರಶ್ನೆ ಮಾಡಿದೆ. ಈ ವೇಳೆ ತಕ್ಷಣವೇ ಚಾಕು ತೆಗೆದು ಹೊಟ್ಟೆಗೆ ಹಾಕಲು ಯತ್ನಿಸಿದ. ಈ ವೇಳೆ ಅದು ತಪ್ಪಿ‌ ನನ್ನ ಕೈಗೆ ಬಿದಿತ್ತು. ಇತ ಒಂದು ಕೊಲೆ ಮಾಡಿ ಬಂದಿದ್ದಾನೆ ಅನ್ನುವುದು ಗೊತ್ತೆ ಇರಲಿಲ್ಲ. ಅಂದು ಘಟನೆಯ ನಂತರ ಈತ ಒಂದು‌ಕೊಲೆ ಮಾಡಿ ಬಂದಿದ್ದಾ‌ ಅನ್ನುವುದು ಕೇಳಿ ಭಯವಾಗಿತ್ತು. ಇಂತಹವನಿಗೆ ತಕ್ಕ ಶಿಕ್ಷೆಯಾಗಬೇಕು. ಇತನಿಗೆ ಹೊರಗೆ ಬಾರದ ಹಾಗೇ ಸಿಐಡಿ ಅಧಿಕಾರಿಗಳು ಮಾಡಬೇಕು ಎಂದು ಅಗ್ರಹಿಸಿದರು.ಮೇ.15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ್ ನಿವಾಸಗೆ ನುಗ್ಗಿ ಗಿರೀಶ್ ಹತ್ಯೆ ಮಾಡಿ‌ ಪರಾರಿಯಾಗಿದ್ದ.ಅಂಜಲಿ‌ ಕೊಲೆಯ‌ ನಂತರ ರೈಲಿನ‌ಮೂಲಕ ತಲೆ ಮರಿಸಿಕೊಳ್ಳಲು ರೈಲಿನಲ್ಲಿ ಇದ್ದ.ಗದಗ ಮೂಲದ ಮಹಿಳೆ ಲಕ್ಷ್ಮಿಗೇ ದಾವಣಗೆರೆ ಬಳಿ ಟ್ರೈನಲ್ಲಿ ಚಾಕು ಇರಿದಿದ್ದ. – ಲಕ್ಷ್ಮಿ,‌ಚಾಕು ಇರಿತಕೊಳ್ಳಗಾದ ಮಹಿಳೆ

Share News

About Shaikh BigTv

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *