ಧಾರವಾಡ : ಲಾಡ್ಜ್ ನಲ್ಲಿ ಭೂಗತ ಪಾತಕಿ ತನ್ನ ಗೆಳತಿಯೊಂದಿಗೆ ಸರಸ ಸಲ್ಲಾಪಕ್ಕೆ ಅವಕಾಶ ಕಲ್ಪಿಸಿದ್ದ ಬಳ್ಳಾರಿ ಪೊಲೀಸರು ಮತ್ತು ಭೂಗತ ಪಾತಕಿ ಲಾಡ್ಜ್ ನಲ್ಲಿಯೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಧಾರವಾಡದ ರಾಯಾಪುರ ಸಮೀಪದ ಲಾಡ್ಜ್ ನಲ್ಲಿ ಘಟನೆ ನಡೆದಿದೆ. ಭೂಗತ ಪಾತಕಿಯನ್ನು ಕೋರ್ಟ್ ಗೆ ಹಾಜರುಪಡಿಸಲು ಬಳ್ಳಾರಿ ಪೊಲೀಸರು ಕರೆದುಕೊಂಡು ಬಂದಿದ್ದರು. ಇದೇ ವೇಳೆ ಪ್ರೇಯಸಿಯೊಂದಿಗೆ ಸರಸ ಸಲ್ಲಾಪಕ್ಕೆ ಲಾಡ್ಜ್ ನಲ್ಲಿ ಅವಕಾಶ ಕಲ್ಪಿಸಿದ್ದರು.
ಬಚ್ಚಾ ಖಾನ್ ನನ್ನು ಧಾರವಾಡ ಕೋರ್ಟ್ ಗೆ ಕರೆತಂದಿದ್ದು, ಮಾರ್ಗಮಧ್ಯೆ ಲಾಡ್ಜ್ ನಲ್ಲಿ ಸರಸ ಸಲ್ಲಾಪಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆತನ ಪ್ರೇಯಸಿ ಮೊದಲೇ ಬಂದು ಲಾಡ್ಜ್ ಹೊರಗೆ ಕಾಯುತ್ತಿದ್ದಳು. ಇವರಿಗೆ ಸರಸ ಸಲ್ಲಾಪಕ್ಕೆ ಅವಕಾಶ ಕಲ್ಪಿಸಿದ ಮಾಹಿತಿ ತಿಳಿದು ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ -ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪ್ರೇಯಸಿ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಬಚ್ಚಾಖಾನ್ ನನ್ನು ವಶಕ್ಕೆ ಪಡೆದು ವಿದ್ಯಾಗಿರಿ ಠಾಣೆಗೆ ಕರೆತರಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

