ಬೆಂಗಳೂರು: ವಿದ್ಯುತ್ ಸಂಪರ್ಕ ನೀಡಲು 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿರುವ ಆರೋಪದಡಿ ಬೆಸ್ಕಾಂನ ಡೈರೆಕ್ಟರ್ ಆಫ್ ಟೆಕ್ನಿಕಲ್ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದೆ. ಮಾವಳ್ಳಿಪುರ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಡಾವಣೆಗೆ 2021 ಕಿಲೋ ವ್ಯಾಟ್ ಸಾಮರ್ಥಯದ ವಿದ್ಯುತ್ ಸಂಪರ್ಕ ನೀಡುವಂತೆ ಫೆ.18ರಂದು ದೂರುದಾರರು ಅರ್ಜಿ ಸಲ್ಲಿಸಿದ್ದರು. ಬೆಸ್ಕಾಂ ಎನ್-9 ಉಪವಿಭಾಗದ ಎ.ಇ.ಇ ಈ ಅರ್ಜಿ ಸ್ವೀಕರಿಸಿ, ಮುಂದಿನ ಕ್ರಮದ ಸಲುವಾಗಿ ಎ.ಇ ರವರಿಗೆ ಕಳುಹಿಸಿದ್ದರು. ಮೇ 6 ರಂದು ಬೆಸ್ಕಾಂನ ಡೈರೆಕ್ಟರ್‌ಆಫ್ ಟೆಕ್ನಿಕಲ್ ರಮೇಶ್ ಅವರನ್ನು ಭೇಟಿ ಮಾಡಿದ ದೂರುದಾರರು, ಈ ಬಗ್ಗೆ ವಿಚಾರಿಸಿದ್ದರು. ಆ ವೇಳೆ ರಮೇಶ್ 5 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 1 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

