ಉಡುಪಿ : ಮಣಿಪಾಲ -ಅಂಬಾಗಿಲು ಗುಂಡಿಬೈಲು, ಕಲ್ಸಂಕ ರಸ್ತೆ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ ಯುವತಿಯೊಬ್ಬಾಕೆ ಶಾಸಕ ರಘುಪತಿ ಭಟ್ ವಿರುದ್ಧ ಆರೋಪ ಮಾಡಿ ವಿಡಿಯೋ ಹರಿಬಿಟ್ಟಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಕೋಮಲ್ ಜೆನಿಫರ್ ಎಂಬಾಕೆ ಶಾಸಕ ರಘುಪತಿ ಭಟ್ ಯಾವುದೇ ಕೆಲಸವನ್ನು ಸರಿಯಾಗಿ ಮಾಡೋದಿಲ್ಲ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. ಯುವತಿಯ ವಿಡಿಯೋ ಉಡುಪಿ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಾವು ರೋಡ್ ಟ್ಯಾಕ್ಸ್, ವೆಹಿಕಲ್ ಟ್ಯಾಕ್ಸ್, ಟೋಲ್ಗೇಟ್ ಟ್ಯಾಕ್ಸ್ ಹೀಗೆ ಎಲ್ಲಾ ಶುಲ್ಕಗಳನ್ನೂ ಪಾವತಿ ಮಾಡ್ತೇವೆ. ಆದರೂ ನಮಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ. ರಘುಪತಿ ಭಟ್ ಮನೆಗೆ ಹೋಗುವ ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿ ಹೋಗಿದೆ ಎಂದು ಯುವತಿ ವಿಡಿಯೋದಲ್ಲಿ ಕಿಡಿಕಾರಿದ್ದಾರೆ.
ದುಬಾರಿ ವಾಹನಗಳಲ್ಲಿ ತೆರಳುವವರಿಗೆ ಇದು ಗೊತ್ತಾಗೋದಿಲ್ಲ. ಆದರೆ ಕಷ್ಟಪಟ್ಟು ದುಡಿದು ಬೈಕ್ ತೆಗೆದುಕೊಂಡವರಿಗೆ ಈ ಸಮಸ್ಯೆಯ ನಿಜವಾದ ನೋವು ಅರ್ಥವಾಗುತ್ತೆ ಎಂದು ತುಳುವಿನಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

