Breaking News

ದೇವಸ್ಥಾನಕ್ಕೆ ಹೊರಟ ಭಕ್ತರು ಸ್ಮಶಾನ ಸೇರಿದರು

ಅರಾವಳಿ(ಗುಜರಾತ್​): ಬೆಳ್ಳಂಬೆಳಗ್ಗೆ ವಿಧಿಯಾಟಕ್ಕೆ ಆರು ಮಂದಿ ಭಕ್ತರು ದುರ್ಮರಣ ಹೊಂದಿದ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಅರಾವಳಿ ಜಿಲ್ಲೆಯ ಮಾಲ್ಪುರ್​ ಎಂಬಲ್ಲಿನ ಕೃಷ್ಣನಗರದ ಅಂಬಾಜಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗ್ತಿದ್ದ ಭಕ್ತರ ಮೇಲೆ ವೇಗವಾಗಿ ಬಂದ ಇನ್ನೋವಾ ಕಾರು ಹರಿದಿದೆ. ಪರಿಣಾಮ, ಆರು ಮಂದಿ ಸಾವಿಗೀಡಗಿದ್ದಾರೆ.

ಅಲ್ಲದೇ ಇತರೆ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರೆಲ್ಲರೂ ದಾಹೋದ್​​ನ ಲಿಮ್ಖೇಡಾ ಮತ್ತು ಮಾಲ್​​ಪುರದವರು ಎಂದು ಗುರುತಿಸಲಾಗಿದೆ.

ಪರಿಹಾರ ಘೋಷಿಸಿದ ಮುಖ್ಯಮಂತ್ರಿ: ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​​ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರಿಗೆ 4 ಲಕ್ಷ ರೂ ಹಾಗೂ ಗಾಯಗೊಂಡಿರುವರಿಗೆ 50 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಘಟನೆಯ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *