Breaking News

ಸೆ. 11ರಂದು ಕರ್ಣ ಪರ್ವ ದೊಡ್ಡಾಟ ಪ್ರದರ್ಶನ

ಹುಬ್ಬಳ್ಳಿ: ಜನಪದ ಕಲಾ ಬಳಗ ಟ್ರಸ್ಟ್ (ರಿ) ಹುಬ್ಬಳ್ಳಿ ವತಿಯಿಂದ ಕರ್ಣ ಪರ್ವ ದೊಡ್ಡಾಟ ಪ್ರದರ್ಶನವನ್ನು ಸೆಪ್ಟೆಂಬರ್ 11 ರಂದು ಸಂಜೆ 5.15 ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರಸಿದ್ಧ ಕಲೆ ದೊಡ್ಡಾಟವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಯುವಜನತೆಗೆ ನಮ್ಮ ದೇಶದ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಡಾ.ಚಂದ್ರಶೇಖರ ಕಂಬಾರ ಅವರ ದತ್ತಿ ಕಾರ್ಯಕ್ರಮದ ಕರ್ಣಪರ್ವ ದೊಡ್ಡಾಟ ಪ್ರದರ್ಶನ ಮಾಡಲಾಗುತ್ತಿದೆ ಎಂದರು‌.

ಈ ಕರ್ಣಪರ್ವ ದೊಡ್ಡಾಟವನ್ನು ರಮೇಶ ಕರಬಸಮ್ಮನವರ ನಿರ್ದೇಶನ ಮಾಡಿದ್ದು, ಗೋವಿಂದಪ್ಪ ತಳವಾರ ಕತೆಗಾರರು ಆಗಿದ್ದಾರೆ. ಶಿವರುದ್ರ ಬಡಗೇರ್, ಉಮೇಶ ಬಮ್ಮಕ್ಕವರ, ಬಿರೇಶ ತಳ್ಳಿಕೇರಿ, ಶಿವಾನಂದ ವಾಲಿಕಾರ, ರಮೇಶ ಕರಬಸಮ್ಮನವರ ಮುಖ್ಯ ಪಾತ್ರಧಾರಿಗಳಾಗಿದ್ದಾರೆ ಎಂದರು.

ಅಂದು ಕಾರ್ಯಕ್ರಮದ ಉದ್ಘಾಟನೆಯನ್ನು ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಟಿ.ಎಮ್.ಭಾಸ್ಕರ್ ಮಾಡಲಿದ್ದು, ದಿವ್ಯ ಸಾನಿಧ್ಯವನ್ನು ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಶಿವಯೋಗಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿ.ಆರ್.ಎನ್.ಸಮೂಹ ಸಂಸ್ಥೆಯ ಸಂಸ್ಥಾಪಕ ಪ್ರಕಾಶ ನಾಯಕ್, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ದೊಡ್ಡಾಟ ಅಕಾಡೆಮಿಯ ಅಧ್ಯಕ್ಷ ಅಜಿತ್ ಬಸಾಪೂರ, ಆಡಳಿತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಸ್‌.ಎಸ್.ಕೆಳದಿಮಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗರಾಜ ಅಂಗಡಿ, ಜಾನಪದ ತಜ್ಞ ಡಾ‌.ರಾಮು ಮೂಲಗಿ ಆಗಮಿಸಲಿದ್ದಾರೆ ಎಂದರು.

ಇದೇ ವೇಳೆ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಹಿರಿಯ ದೊಡ್ಡಾಟ ಕಲಾವಿದರಾದ ಅಡವಯ್ಯಸ್ವಾಮಿ ಹಿರೇಮಠ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಎಚ್.ಎಸ್.ಕಿರಣ, ಮಾರುತಿ ಹುಟಗಿ, ಕಾರ್ಯದರ್ಶಿ ರಮೇಶ ಕರಬಸಮ್ಮನವರ, ಸಹ ಕಾರ್ಯದರ್ಶಿ ಶಿವರುದ್ರಪ್ಪ ಬಡಿಗೇರ್, ಖಜಾಂಚಿ ಬೀರೇಶ ತಳ್ಳಿಕೇರಿ ಸೇರಿದಂತೆ ಮುಂತಾದವರು ಇದ್ದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *