Breaking News

ಸೌಹಾರ್ಧತೆಗೆ ಮತ್ತೊಮ್ಮೆ ಸಾಕ್ಷಿಯಾದ ಧಾರವಾಡ : ಮಸೀದಿ ಎದುರು ಗಣೇಶನಿಗೆ ಮಾಲಾರ್ಪಣೆ

ಧಾರವಾಡ : ಹಿಂದೂ , ಮುಸ್ಲಿಂ ಭಾಯಿ ಭಾಯಿ ಎಂಬುದಕ್ಕೆ ಧಾರವಾಡ ಮತ್ತೊಮ್ಮೆ ಸಾಕ್ಷಿಯಾಗಿದೆ . ಧಾರವಾಡದಲ್ಲಿ ಮುಸ್ಲಿಂ ಯುವಕರು ಗಣೇಶ ವಿಸರ್ಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಸೌಹಾರ್ಧತೆಗೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ .

ಹೌದು ! ನಾಳೆ ಹುಣ್ಣಿಮೆ ಇರುವುದರಿಂದ 11 ನೇ ದಿನದ ಗಣೇಶನನ್ನು ವಿಸರ್ಜನೆ ಮಾಡಲು ಕೊಂಡೊಯ್ಯಲಾಗುತ್ತಿತ್ತು . ಮೆರವಣಿಗೆ ಮೂಲಕ ತರಲಾಗುತ್ತಿದ್ದ ಗಣೇಶನ ಮೂರ್ತಿ ಧಾರವಾಡದ ಮದನಿ ಮಸೀದಿ ಎದುರಿಗೆ ಬರುತ್ತಿದ್ದಂತೆ ಮುಸ್ಲಿಂ ಯುವಕರು ಗಣೇಶನ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದ್ದಾರೆ . ಮುಜಮಿಲ್ ಪಠಾಣ್ ನೇತೃತ್ವದಲ್ಲಿ ಮುಸ್ಲಿಂ ಯುವಕರ ತಂಡ ಗಣೇಶನಿಗೆ ಮಾಲಾರ್ಪಣೆ ಮಾಡುವ ಮೂಲಕ ಸೌಹಾರ್ಧತೆ ಮೆರೆದಿದ್ದಾರೆ .

ಅಷ್ಟೇ ಅಲ್ಲದೇ ಘೋಷಣೆಗಳನ್ನು ಕೂಗಿ ಸಂಭ್ರಮದಿಂದಲೇ ಗಣೇಶನಿಗೆ ವಿದಾಯ ಹೇಳಿದ್ದಾರೆ . ಒಟ್ಟಾರೆ ಧಾರವಾಡ ಸೌಹಾರ್ಧತೆಗೆ ಮತ್ತೊಂದು ಬಾರಿ ಸಾಕ್ಷಿಯಾದಂತಾಗಿದೆ

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *