Breaking News

ಖಾಸಗಿ ಆಸ್ಪತ್ರೆಗೇ ಸವಾಲು … ಚಿಟಗುಪ್ಪಿ ಸರ್ಕಾರಿ ಆಸ್ಪತ್ರೆ ಕಾರ್ಯ ನಿರ್ವಹಣೆ !

ಹುಬ್ಬಳ್ಳಿ : ಸರ್ಕಾರಿ ಆಸ್ಪತ್ರೆ ಅಂದ್ರೆ ನಮಗೆ ಅಲ್ಲಿಯ ಬಗ್ಗೆ ಒಂದು ಕೆಟ್ಟ ಅನುಭವದ ಕಲ್ಪನೆ ಇದ್ದೇ ಇರುತ್ತೆ .ಆದರೆ ಹುಬ್ಬಳ್ಳಿಯಲ್ಲಿನ ಈ ಆಸ್ಪತ್ರೆ , ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದೆ .ಅಲ್ಲದೆ , ಬಡರೋಗಿಗಳಿಗೆ ಸಂಜೀವಿನಿಯಾಗಿ ಇಲ್ಲಿಯ ವೈದ್ಯರು ಕಾರ್ಯ ನಿರ್ವಹಿಸುತ್ತಾ ಸದ್ಯ ಹೊಸದೊಂದು ಸಾಧನೆ ಮಾಡಿದ್ದಾರೆ .

ಈ ದೃಶ್ಯಗಳಲ್ಲಿ ನೀವು ನೋಡುವ ಆಸ್ಪತ್ರೆ , ಖಾಸಗಿ ಆಸ್ಪತ್ರೆ ಅಲ್ಲವೇ ಅಲ್ಲ ! ಇದು ಅಪ್ಪಟ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಹುಬ್ಬಳ್ಳಿಯ ಚಿಟಗುಪ್ಪಿ ಹೆರಿಗೆ ಆಸ್ಪತ್ರೆ . ಇಷ್ಟೊಂದು ಕ್ಲೀನ್ , ಅಚ್ಚುಕಟ್ಟಾಗಿ ಈ ಆಸ್ಪತ್ರೆ ಇರುವುದರ ಜೊತೆಗೆ ಇಲ್ಲಿಯ ವೈದ್ಯರು ಬಡಜನರಿಗೆ ದೇವರಂತೆ ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ .

ಹೀಗೆ ಬೆಡ್ ಮೇಲೆ ಕುಳಿತು ಆನಂದ ಬಾಷ್ಪದೊಂದಿಗೆ ಮಾತನಾಡಿದ ಮಹಿಳೆ ಹೆಸರು ನಸೀನ್ ಬಾನು . ಈಕೆ ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು .

ಓಪನ್ ಸರ್ಜರಿ ಮಾಡಿದ್ದರೆ ಇವರಿಗಿರುವ ವಯೋಸಹಜ ಕಾಯಿಲೆಯಿಂದ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ದಟ್ಟವಾಗಿತ್ತು . ಇದಕ್ಕಾಗಿ ವಿಶೇಷ ಕಾಳಜಿ ವಹಿಸಿದ ಡಾ.ಶ್ರೀಧರ್ ದಂಡೆಪ್ಪನವರ , ಖಾಸಗಿ ಸ್ನೇಹಿತರ ಬಳಿಯಿಂದ ಲ್ಯಾಪೋಸ್ಕೋಪಿ ಮೆಷಿನ್ ಪಡೆದು ಸರ್ಜರಿ ಮಾಡಿ ಗರ್ಭಕೋಶದಲ್ಲಿದ್ದ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ . ಇನ್ನು , ಮುಂದಿನ ದಿನಗಳಲ್ಲಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಹೊಸ ಕಟ್ಟಡದೊಂದಿಗೆ 100 ಹಾಸಿಗೆಗಳ ಜೊತೆಗೆ ಅತ್ಯಾಧುನಿಕ ಚಿಕಿತ್ಸೆ ಸಾರ್ವಜನಿಕರಿಗೆ ಸಿಗಲಿದೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *