ಹುಬ್ಬಳ್ಳಿ: ತಂದೆ ಮಗನಿಗೆ ಬೈದ ಅಂತ ಒಂದೇ ಕಾರಣಕ್ಕೆ ಮಗ ಸೆಲಕಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಗಿರಿಯಾಳದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಳ್ಳಂ ಬೆಳೆಗ್ಗೆ ಕೆಲಸ ಮಾಡುವ ವಿಚಾರಕ್ಕೆ ತಂದೆ ಮಗನ ನಡುವೆ ವಾದ ವಿವಾದ ನಡೆದು ಮಗನಿಗೆ ತಂದೆ ಅವಾಚ್ಯ ಶಬ್ದದಿಂದಿ ಬೈದಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಕೊಲೆಯಾದ ವ್ಯಕ್ತಿ ಉಮೇಶ ಮಹದೆರವಪ್ಪ ಸುಡಕೇನವರ

(58) ಎಂದು ಗುರುತಿಸಲಾಗಿದೆ. ಆರೋಪಿ ಹನಮಂತಪ್ಪ ಉಮೇಶ ಸುಡಕೇನವರ ಆಗಿದ್ದು. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

