Breaking News

ನಟಿ ಆಶಾ ಪರೇಖ್‌ ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ

ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಬಾಲಿವುಡ್‌ ಹಿರಿಯ ನಟಿ ಆಶಾ ಪರೇಖ್‌ ಗೆ ರಾಷ್ಟ್ರಪತಿ ದ್ರೌಪದಿ ಮರ್ಮು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಆಶಾ ಪರೇಖ್‌ ಅವರಿಗೆ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಆಶಾ ಪರೇಖ್‌ ಅವರ ೮೦ನೇ ಜನ್ಮದಿನದ ಒಂದು ದಿನ ಮುನ್ನ ಈ ಪ್ರಶಸ್ತಿ ಬಂದಿರುವುದು ವಿಶೇಷ.

ಇದಕ್ಕೂ ಮುನ್ನ ನಟರಾದ ಅಜಯ್‌ ದೇವಗನ್‌ ಮತ್ತು ಸೂರ್ಯ 68ನೇ ಸಾಲಿನ ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ಸ್ವೀಕರಿಸಿದರು. ತಾನಾಜಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅಜಯ್‌ ದೇವಗನ್‌ ಮತ್ತು ಸುರಾರೈ ಪೊಟ್ರು ತಮಿಳು ಚಿತ್ರದಲ್ಲಿನ ಅಭಿನಯಕ್ಕಾಗಿ ಸೂರ್ಯ ಜಂಟಿ ಶ್ರೇಷ್ಠ ನಟ ಪ್ರಶಸ್ತಿ ಸ್ವೀಕರಿಸಿದರು.

ಸೂರರೈ ಪೊಟ್ರು ಶ್ರೇಷ್ಠ ನಟ ಅಲ್ಲದೇ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದು, ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಅಪರ್ಣಾ ಬಾಲಮುರಳಿ ಸ್ವೀಕರಿಸಿದರು. ಅಲ್ಲದೇ ಹಿನ್ನೆಲೆ ಸಂಗೀತಕ್ಕಾಗಿ ಮತ್ತು ಶ್ರೇಷ್ಠ ಚಿತ್ರಕಥೆಗಾಗಿ ಪ್ರಶಸ್ತಿಯನ್ನು ಪಡೆಯಿತು.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *