ಹುಬ್ಬಳ್ಳಿ: ನೂರಾರು ಸ್ಟಾರ್ಟಫ್ ಗಳ ಬೆಳವಣಿಗೆಗೆ ಹೆಸರಾಗಿರುವ ದೇಶಪಾಂಡೆ ಸ್ಟಾರ್ಟ್ ಅಫ್ ಸಹಯೋಗದೊಂದಿಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಟೆಕ್ಸಲರೇಶನ್(ಟೆಕ್ ಉತ್ಸವ) 2022 ರಾಷ್ಟ್ರೀಯ ತಾಂತ್ರಿಕ ಶಕ್ತಿಯ ಪ್ರದರ್ಶನವನ್ನು ಅಕ್ಟೋಬರ್ 02,03ರಂದು ಹುಬ್ಬಳ್ಳಿಯ ಡೆನಿಸನ್ಸ್ ಹೊಟೇಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಹುಬ್ಬಳ್ಳಿ,ಧಾರವಾಡ, ಬೆಳಗಾವಿ ಕ್ಲಸ್ಟರ್ ನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮೂಲಕ ಎರಡು ದಿನಗಳ ಟೆಕ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, 1000ಕ್ಕೂ ಅಧಿಕ ಪ್ರತಿನಿಧಿಗಳು, 2000ಕ್ಕೂ ಅಧಿಕ ವಾಕಥಾನ್ ಸ್ಪರ್ಧಿಗಳು, 50ಕ್ಕೂ ಅಧಿಕ ಸ್ಟಾರ್ಟ್ ಅಫ್ ಶೋಕೇಸ್, 250ಕ್ಕೂ ಹೆಚ್ಚು CXOs, 25ಕ್ಕೂ ಅಧಿಕ ಹೂಡಿಕೆದಾರರು, 1000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ವಿಶ್ವಾಸಾರ್ಹ ಪಾಲುದಾರ ಮತ್ತು ತಾಂತ್ರಿಕ ಅಭಿವೃದ್ಧಿ ಸಲಹೆಗಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಇಲ್ಲಿಯವರೆಗೆ ಸಾಧಿಸಿದ ಪ್ರಗತಿ ಪ್ರದರ್ಶಿಸಲು ಮತ್ತು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಕ್ಲಸ್ಟರ್ ಅಭಿವೃದ್ಧಿಗೆ ಅಡಿಪಾಯ ಹಾಕಲು ಟೆಕ್ ಉತ್ಸವ ಹಮ್ಮಿಕೊಳ್ಳಲಾಗಿದೆ.
ಇನ್ನೂ ಟೆಕ್ ಉತ್ಸವದಲ್ಲಿ ಬಿಯಾಂಡ್ ಬೆಂಗಳೂರು ಬ್ಲೂ, ಸಿಇಒ ರೌಂಡ್ ಟೇಬಲ್, ವಾಕ್ ಥಾನ್, ಸ್ಟಾರ್ಟ್ ಅಫ್ ಶೋಕೇಸ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸ್ಟಾರ್ಟ್ ಅಫ್ ಹಬ್ ಆಗಿರುವ ವಾಣಿಜ್ಯನಗರಿಯ ಶಕ್ತಿಯನ್ನು ಮತ್ತಷ್ಟು ಬಲಪಡಿಸಲು ಇಂತಹದೊಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಒಟ್ಟಿನಲ್ಲಿ ದೇಶಪಾಂಡೆ ಫೌಂಡೇಶನ್ ಹಾಗೂ ಸ್ಟಾರ್ಟ್ ಅಫ್ ಸಹಭಾಗಿತ್ವದಲ್ಲಿ ಇಂತಹದೊಂದು ಉತ್ಸವ ಮತ್ತಷ್ಟು ಸ್ಟಾರ್ಟ್ ಅಫ್ ಅಭಿವೃದ್ಧಿಗೆ ಪೂರಕವಾಗುವುದು ಮಾತ್ರವಲ್ಲದೆ ಹಲವಾರು ಚಿಂತನೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

