ಹುಬ್ಬಳ್ಳಿ: ಬಸ್ಸು ಹತ್ತುವಾಗ ಮಹಿಳೆಯೊಬ್ಬರ ಬ್ಯಾಗನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಅಂತರ ರಾಜ್ಯ ಮಹಿಳಾ ಆರೋಪಿತಳನ್ನು ಬಂಧಿಸುವಲ್ಲಿ ಗೋಕುಲ ರೋಡ್ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತಳಿಂದ ಕಳ್ಳತನ ಮಾಡಿದ 9,50,000 ಮೌಲ್ಯದ 139 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.ಹೌದು..ಹುಬ್ಬಳ್ಳಿ ಗೋಕುಲ ರೋಡ ಹೊಸ ಬಸ್ ನಿಲ್ದಾಣದ ಪ್ಲಾಟ ಫಾರ್ಮ್ ನಂ 4ರಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಹತ್ತುವಾಗ ಮಹಿಳೆಯೊಬ್ಬರು ಹೆಗಲಿಗೆ ಹಾಕಿಕೊಂಡಿದ್ದ ವ್ಯಾನಟಿ ಬ್ಯಾಗದ ಜೀಪನ್ನು ಓಪನ್ ಮಾಡಿ ವ್ಯಾನಟಿ ಬ್ಯಾಗದಲ್ಲಿದ್ದ 139 ಗ್ರಾಂ ತೂಕದ ಬಂಗಾರದ ವಡವೆಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದು, ಈಗ ಅಂತರ ರಾಜ್ಯ ಮಹಿಳಾ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಗೋಕುಲ ರೋಡ ಪೊಲೀಸ ಠಾಣೆಯ ಪೊಲೀಸ ಇನ್ಸ್ಪೆಕ್ಟರ್ ಪ್ರವೀಣ ನೀಲಮ್ಮನವರ, ಪೊಲೀಸ್ ಸಬ್ ಇನ್ಸಪೆಕ್ಟರ್ ದೇವೆಂದ್ರ ಮಾವಿನಂಡಿ, ಎ.ಎಸ್.ಐ ಜಿ.ಸಿ ರಜಪೂತ ಹಾಗೂ ಅವರ ಠಾಣೆಯ ಸಿಬ್ಬಂದಿಯವರಾದ ರಾಜು ಹೊಂಕಣದವರ, ಚಂದ್ರು ನಡುವಿನಮನಿ, ವಸಂತ ಗುಡಗೇರಿ, ಪ್ರಕಾಶ ತಗಡಿನಮನಿ, ಜಗದೀಶ ಮತ್ತಿಗಟ್ಟಿ, ಲಕ್ಷ್ಮಣ ನಾಯಕ, ಶಿವಾನಂದ ಕೆಂಪೋಡಿ. ಮಹೇಶ ಬೆನ್ನೂರ, ಶರಣಪ್ಪ ಕೋರಿ, ಸುರೇಶ ಕೋಲಿ, ವೀಣಾ ಹಿಪ್ಪರಗಿಮಠ, ತಾಂತ್ರಿಕ ಸಿಬ್ಬಂದಿಗಳಾದ ಜಿ.ಜಿ ಚಿಕ್ಕಮಠ, ರಾಘವೇಂದ್ರ ಭಡಂಕರ, ರವಿ ಗೋಮಪ್ಪನವರ ಇವರನ್ನೊಳಗೊಂಡ ತಂಡವು ಆರೋಪಿತಳಾದ ಸಂದ್ಯಾಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

