ಬೆಂಗಳೂರು : ‘ಕನ್ನಡಕ್ಕಿರುವ ಗೌರವವನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಬೇಸರ ವ್ಯಕ್ತಪಡಿಸಿದರು.
ಕನ್ನಡ ಜನಶಕ್ತಿ ಕೇಂದ್ರದಿಂದ ಭಾನುವಾರ ನಡೆದ ‘ಕನ್ನಡವೆಂದರೆ ಬರಿ ನುಡಿಯಲ್ಲ’ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಕನ್ನಡವನ್ನು ಸಂವಿಧಾನ ಗೌರವಿಸಿ ಮಾನ್ಯತೆ ನೀಡಿದೆ. ಕರ್ನಾಟಕ ಹಾಗೂ ಕನ್ನಡಕ್ಕೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ಭೇದಭಾವ ಇಲ್ಲ. ಕನ್ನಡಿಗರಲ್ಲಿ ಹರಿಯುವ ರಕ್ತ ಒಂದೇ. ಆದರೆ, ಕೆಲವರು ಪ್ರಾದೇಶಿಕ ಭಿನ್ನತೆ ವ್ಯಕ್ತಪಡಿಸುತ್ತಿದ್ಧಾರೆ’ ಎಂದು ಹೇಳಿದರು.
‘ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಬಂದರೆ ಆರಂಭದಲ್ಲಿಯೇ ಮಟ್ಟಹಾಕಬೇಕು’ ಎಂದು ಸಲಹೆ ನೀಡಿದರು. ‘ಕನ್ನಡದ ಪಂಡಿತ ನಾನು ಅಲ್ಲ. ಆದರೆ, ನಾನು ಕನ್ನಡದ ಅಪ್ಪಟ ಅಭಿಮಾನಿ’ ಎಂದೂ ಸಂತೋಷ ಹೆಗ್ಡೆ ನುಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

