ಧಾರವಾಡ: ನಗರದಲ್ಲಿ ನಡೆದಿದ್ದ ಮಹಿಳೆಯ ಬರ್ಬರ ಹತ್ಯೆಯನ್ನು ಖಾಕಿ ಪಡೆ ಭೇದಿಸಿದೆ.
ಇದೇ ತಿಂಗಳ 14ರ ಸಂಜೆ ಜಿಲ್ಲಾಸ್ಪತ್ರೆ ಎದುರು ಮಹಿಳೆಯ ಬರ್ಬರ ಹತ್ಯೆ ನಡೆದಿತ್ತು. ಹತ್ಯೆಯ ಆರೋಪಿ ಆನಂದ ದುಧನಿ ಎಂಬತನನ್ನು ಪೊಲೀಸರು ಬಂಧಿಸಿದ್ದಾರೆ.
ಗಂಡನನ್ನು ಕಳೆದುಕೊಂಡಿದ್ದ ನೆಹರೂನಗರದ ಸವಿತಾ ಕಿತ್ತೂರು, ಆನಂದನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಹೀಗಾಗಿ ಆನಂದ ಸವಿತಾಗೆ ಹಣ ಕೂಡ ನೀಡಿದ್ದ. ಸವಿತಾ ಆನಂದನನ್ನು ಬಿಟ್ಟು ಮತ್ತೆ ಇನ್ನೊಬ್ಬರ ಜೊತೆ ಸಂಪರ್ಕ ಹೊಂದಿದ್ದಾಳೆ ಎಂದು ತಿಳಿದ ಆನಂದ ಆಕೆಯ ಮೇಲೆ ಕೋಪಗೊಂಡಿದ್ದ. ಅ.14 ರಂದು ಆಕೆಯನ್ನು ಕರೆದುಕೊಂಡು ಬಂದಿದ್ದ ಆರೋಪಿ, ತಲ್ವಾರ್‌ನಿಂದ ಮನ ಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ.
ಇದೀಗ ಈ ಪ್ರಕರಣವನ್ನು ಬೇಧಿಸಿರುವ ಉಪನಗರ ಠಾಣೆ ಪೊಲೀಸರು, ಆನಂದನನ್ನು ಹೆಡೆಮುರಿ ಕಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

