Breaking News

ಮುರುಘಾಶ್ರೀ ವಿರುದ್ಧ ಮತ್ತೊಂದು ಪ್ರಕರಣ ದಾಖಲು


ಚಿತ್ರದುರ್ಗ: ಪೋಕ್ಸೋ ಕೇಸಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಚಿತ್ರದುರ್ಗದ ಮುರುಘಾಶ್ರೀ ಸೇರಿ ನಾಲ್ವರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಕೇಸ್ ದಾಖಲಾಗಿದೆ. A1 ಮುರುಘಾಶ್ರೀ, A2 ಮಠದ ಕಾರ್ಯದರ್ಶಿ ಪರಮಶಿವಯ್ಯ, 3ನೇ ಆರೋಪಿ ಮುರುಘಾ ಮಠದ ಹಾಸ್ಟೆಲ್​​ನ ಲೇಡಿ ವಾರ್ಡನ್, A4 ಮಡಿಲು ದತ್ತು ಕೇಂದ್ರದ ಮುಖ್ಯಸ್ಥೆ ವೀಣಾ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಈಗಾಗಲೇ ಪೋಕ್ಸೋ ಕೇಸ್​ನಲ್ಲಿ ಎ1 ಮುರುಘಾಶ್ರೀ ಹಾಗೂ ಎ3 ಮುರುಘಾ ಮಠದ ಹಾಸ್ಟೆಲ್​​ನ ಲೇಡಿ ವಾರ್ಡನ್ ಜೈಲಿನಲ್ಲಿದ್ದಾರೆ. ಹಾಸ್ಟೆಲ್​​ನಲ್ಲಿ ಅಕ್ರಮವಾಗಿ ಇಬ್ಬರು ಬಾಲಕಿಯರ ಪಾಲನೆ ಮಾಡಲಾಗುತ್ತಿದೆ. ಮುರುಘಾಶ್ರೀ ವಿರುದ್ಧ ಆ.26ರಂದು ಪೋಕ್ಸೋ ಕೇಸ್ ಹಿನ್ನೆಲೆ ಮಠದ ಹಾಸ್ಟೆಲ್​​​ಗೆ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಮುರುಘಾಮಠದ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದರು. ಆಗ ಮಠದ ಹಾಸ್ಟೆಲ್​ನಲ್ಲಿದ್ದ ಮಕ್ಕಳನ್ನ ಸರ್ಕಾರಿ ಹಾಸ್ಟೆಲ್, ಬಾಲಮಂದಿರಕ್ಕೆ ಶಿಫ್ಟ್ ಮಾಡಲಾಗಿತ್ತು. CWC ಗಮನಕ್ಕೆ ತರದೆ ಇಬ್ಬರು ಮಕ್ಕಳ ಪಾಲನೆ ಮಾಡುತ್ತಿರುವ ಆರೋಪ ಹಿನ್ನೆಲೆ CWC ಅಧಿಕಾರಿಗಳು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಕೇಸ್ ದಾಖಲಿಸಿದ್ದಾರೆ.

Share News

About BigTv News

Check Also

ವಿಜಯನಗರ : ಕ್ಷುಲ್ಲಕ ಕಾರಣಕ್ಕೆ ಗಲಾಟೆ – ರುಬ್ಬುಗುಂಡಿನ ಕಲ್ಲಿನಿಂದ ಹೊಡೆದು ಯುವಕನ ಭೀಕರ ಕೊಲೆ

ಹೊಸಪೇಟೆ: ನಗರದ ಸಿದ್ದಲಿಂಗಪ್ಪ ಚೌಕಿಯ 4ನೇ ಕ್ರಾಸ್‌ನ ಎಲ್ಲಮ್ಮ ದೇವಸ್ಥಾನದ ಬಳಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ …

Leave a Reply

Your email address will not be published. Required fields are marked *