Breaking News

ಹೊಟೆಲ್‌ ನಲ್ಲಿ ಕಾರ್ ಸ್ಫೋಟ : 7 ಜನ ಸಾವು, 47 ಮಂದಿಗೆ ಗಾಯ


ದಕ್ಷಿಣ ಸೊಮಾಲಿಯಾ:  ಕಿಸ್ಮಾಯೊದಲ್ಲಿನ ಹೊಟೆಲ್‌ ನಲ್ಲಿ  ಕಾರ್ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಹಾಗೂ 47 ಮಂದಿ ಗಾಯಗೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಸುದ್ದಿ ಮೂಲಗಳು ವರದಿ ಮಾಡಿವೆ.

ಈ ಘಟನೆಯ ಹೊಣೆಯನ್ನು ಇಸ್ಲಾಮಿಸ್ಟ್ ಗುಂಪು ಅಲ್-ಶಬಾಬ್ ಹೊತ್ತುಕೊಂಡಿದೆ ಎನ್ನಲಾಗಿದೆ. ಅಲ್-ಖೈದಾ ಉಗ್ರ ಸಂಘಟನೆಯು ಮೊಗಾದಿಶು, ಹಾಗೂ ಮಧ್ಯ ಸೊಮಾಲಿಯಾವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಇದು ಇತ್ತೀಚಿನದಾಗಿದೆ.

ಮಧ್ಯಾಹ್ನ 12.45ರ ಸುಮಾರಿಗೆ ಹೊಟೆಲ್‌ ತವಕಲ್‌ ಗೆ ಉಗ್ರ ದಾಳಿಕೋರರಿದ್ದ ಕಾರು ಢಿಕ್ಕಿ ಹೊಡೆದನಂತರ ದಾಳಿ ಪ್ರಾರಂಭವಾಗಿದ್ದು ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಕೆಲವು ಗಂಟೆಗಳ ಕಾಲ ಹೋರಾಟ ನಡೆದಿದೆ. ಅಂತೂ ಸಾಯಂಕಾಲ 7 ಗಂಟೆಯ ಸುಮಾರಿಗೆ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಹತ್ತಿರದ ಶಾಲೆಗಳಿಂದ ವಾಪಸ್ಸಾಗುತ್ತಿದ್ದ ವಿದ್ಯಾರ್ಥಿಗಳೂ ಸೇರಿದ್ದಾರೆ ಎನ್ನಲಾಗಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *