Breaking News

ಬೈಕ್ ಕಳ್ಳರನ್ನು ಎಡೆಮುರಿ ಕಟ್ಟಿದ ಹುಬ್ಬಳ್ಳಿ ಖಾಕಿಪಡೆ : ಇಬ್ಬರು ಬಂಧನ

ಹುಬ್ಬಳ್ಳಿ : ಇತ್ತೀಚೆಗೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬೈಕ್ ಕಳೆದುಕೊಂಡು ಠಾಣೆ ಮೆಟ್ಟಿಲೇರುವವರ ಸಂಖ್ಯೆ ಹೆಚ್ಚಾಗಿದೆ. ಮನೆ ಮುಂದೆ ಅಂಗಡಿ ಮುಂದೆ ನಿಲ್ಲಿಸಿದ ಬೈಕ್ ಗಳನ್ನೇ ಎಸ್ಕೇಪ್ ಮಾಡುತ್ತಿದ್ದ ಚಾಲಾಕಿ ಬೈಕ್ ಖದೀಮರನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲಿಸರು ಇದೀಗ ಎಡೆಮುರಿ ಕಟ್ಟಿದ್ದಾರೆ.

ವಿವಿಧ ಜಿಲ್ಲೆಗಳಿಂದ ಬೈಕಗಳನ್ನು ಕದ್ದು ಮಾರಾಟ ಮಾಡುತಿದ್ದ ಇಬ್ಬರನ್ನೂ ಬಂಧಿಸಿದ್ದು ಇನ್ನೊಬ್ಬ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಬಂಧಿತ ಆರೋಪಿಗಳಿಂದ ಸುಮಾರು 580,000 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಯ 8 ದ್ವೀಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳ ಹೆಸರ ಆಸೀಫಅಹ್ಮದ ಸುಂಕದ 30 ವರ್ಷ ಹಾಗೂ ಜಿಲಾನಿ ಸುಂಕದ 28 ವರ್ಷ ತಲಗಡ್ಡೆ ಗ್ರಾಮ,ಸೊರಬಾ ತಾಲೂಕ ಶಿವಮೊಗ್ಗ ಜಿಲ್ಲಾ ದವರು ಎಂದು ತಿಳಿದುಬಂದಿದೆ.

ಹುಬ್ಬಳ್ಳಿ ಧಾರವಾಡ ಆಯುಕ್ತರಾದ ಲಭೂ ರಾಮ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸ್ಪೆಕ್ಟರ್ ಶ್ರೀ ಸಂತೋಷ ಕ. ಪವಾರ ಇವರ ನೇತೃತ್ವದ ಪಿ ಏಸ್ ಐ ಶ್ರೀ ಶ್ರೀಮಂತ ಹುಣಸಿಕಟ್ಟಿ, ಹಾಗೂ ಸಿಬ್ಬಂಗಳಾದ ರಮೇಶ ಹಲ್ಲೆ, ಸುನೀಲ ಲಮಾಣಿ, ಎಸ್.ಎಮ ತಿರಕಣ್ಣವರ, ಎಚ್‌ ಎಚ್‌ ತಹಶೀಲ್ದಾರ ಹಾಗೂ ಶರಣು ಮೂಲಿಮನಿ ಇವರ ತಂಡವು ಕರ್ತವ್ಯ ನಿರ್ವಹಿಸಿದ್ದು ಇವರ ಕಾರ್ಯವೈಖರಿಯನ್ನು ಪೊಲೀಸ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರ ಶ್ಲಾಘಿಸಿರುತ್ತಾರೆ

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *