ಚಿತ್ರದುರ್ಗ : ಇಂದು ಮುರುಘಾ ಶ್ರೀ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಸಂಜೆ 4 ಗಂಟೆಗೆ ಮುರುಘಾ ಶ್ರೀ ಕೋರ್ಟ್ಗೆ ಹಾಜರಾಗುತ್ತಾರೆ. ಚಿತ್ರದುರ್ಗ ಡಿವೈಎಸ್ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ.
ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದ್ದು, ಕೋರ್ಟ್ಗೆ ಹಾಜರು ಮುನ್ನ ಮಠದಲ್ಲಿ ಸ್ಥಳಮಹಜರು ಮಾಡಲಾಗುತ್ತದೆ.
ಬೆಳಗ್ಗೆ 10 ಗಂಟೆಗೆ ಮಠಕ್ಕೆ ಸ್ಥಳಮಹಜರಿಗೆ ಕರೆದೊಯಲಾಗುತ್ತದೆ. ಸ್ಥಳ ಮಹಜರು ಬಳಿಕ ಮುರುಘಾ ಶ್ರೀ ಕೋರ್ಟ್ಗೆ ಹಾಜರು ಪಡಸಲಾಗುತ್ತದೆ. ನಿನ್ನೆ ಜಿಲ್ಲಾಸ್ಪತ್ರೆಯಲ್ಲಿ ಮುರುಘಾ ಶ್ರೀ ಪುರುಷತ್ವ ಪರೀಕ್ಷೆ ನಡೆಸಲಾಗಿದ್ದು, ಕೂದಲು, ಉಗುರು, ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿದ್ದಾರೆ. ಇಂದು ಕಸ್ಟಡಿ ಅಂತ್ಯ ಹಿನ್ನೆಲೆ ಕೋರ್ಟ್ಗೆ ಹಾಜರು ಪಡಿಸಲಾಗುತ್ತದೆ. ಪೊಲೀಸರು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

