ಹುಬ್ಬಳ್ಳಿ : ವೈಯಕ್ತಿಕ ಜಗಳದಿಂದಾಗಿ ಯುವಕರು ಇಬ್ಬರು ಹೊಡೆದಾಡಿಕೊಂಡ ಚಾಕು ಇರಿತವಾದ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇಹುಬ್ಭಳ್ಳಿ ದುರ್ಗದ ಬೈಲ್ ಸರ್ಕಲ್ ಸಮೀಪ ಕಾರ್ಪೊರೇಷನ್ ಆಫೀಸ್ ಮುಂದೆ ನಡೆದಿದೆ.

ಸಂತೋಷ ಮುರಗೋಡ ( ೩೪ ವರ್ಷ ) ಹಲ್ಲೆ ಗೀಡಾದ ಯುವಕ. ಶಿವಾನಂದ ನಾಯ್ಕ ( ೩೨ ) ಕುರುಬರ ಓಣಿ ಇತನು ತನ್ನ ವೈಯಕ್ತಿಕ ಜಗಳದಿಂದಾಗಿ ಬೈದಾಡಿಕೊಂಡು ನಂತರ ಸಿಟ್ಟಿನಿಂದ ಸಂತೋಷ ಮುರಗೋಡ ಇತನಿಗೆ ಹೊಟ್ಟೆಗೆ ಹಾಗೂ ಇತರಡೆ ಇರಿದಿದ್ದರಿಂದ ಗಾಯಗೊಂಡು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು , ಸ್ಥಿತಿ ಚಿಂತಾಂಜನಕವಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

