Breaking News

ನಾನು ಇನ್ನೂ ಗಟ್ಟಿ ಇದ್ದೇನಿ ನಮ್ಮ ಕ್ಷೇತ್ರಕ್ಕೆ ಯಾರನ್ನು ಬರಲು ಬಿಡಲ್ಲಾ; ಶಾಸಕ ನಿಂಬಣ್ಣವರ

ಹುಬ್ಬಳ್ಳಿ: ನಮ್ಮ ಪಕ್ಷ ಟಿಕೇಟ್ ಕೊಟ್ಟು ನೀವು ಒಳ್ಳೆ ಕೆಲಸ ಮಾಡಿದ್ದಿರಿ, ನಿಮ್ಮ ಬೆನ್ನು ಹಿಂದೆ ನಿಲ್ತೆವಿ ಅಂದ್ರೆ ಈ ಬಾರಿ ಚುನಾವಣೆಗೆ ಅಖಾಡಕ್ಕೆ ಇಳಿತೆನಿ. ನಾನ ಯಾವತ್ತೂ ಕಾಲು ಕೆದರಿ ಜಗಳಕ್ಕೆ ಹೋಗಲ್ಲ ಎಂದು ಕಲಘಟಗಿ ಬಿಜೆಪಿ ಶಾಸಕ ಸಿಎಮ್ ನಿಂಬಣ್ಣವರ ಹೇಳಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವ ಯಾರು ಬೇಕಾದ್ರು ಆಕಾಂಕ್ಷಿಗಳು ಇರಬಹುದು. ಈಗಾಗಲೇ ಹಾಲಿ ಶಾಸಕ ಅದೇನಿ. ನೂರಾರು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ಜನಕ್ಕೆ ಗೊತ್ತಾಗುತ್ತದೆ ಎಂದರು.

ಕಲಘಟಗಿ ಕ್ಷೇತ್ರಕ್ಕೆ ನನ್ನ ಬಿಟ್ಟು ಯಾರು ನಿಲ್ಲಲ್ಲ. ನಮ್ಮಲ್ಲಿ ಬಡವರಿದಾರೆ ಪಾಪ ಹೊರಗಿಂದ ಬಂದು ಮೇಯಿಬೇಕು ಅಂತಾರೆ. ಅದಕ್ಕೆ ನಾನು ಆಸ್ಪದ ಕೊಡಲ್ಲ. ಪಕ್ಷಕ್ಕಾಗಿ ಸಾಕಷ್ಟು ದುಡಿದ್ದೇನೆ. ನನಗೆ ಯಾವುದೇ ಭಯ ಇಲ್ಲ ಎಂದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *