Breaking News

ಇಂದು ಅಂಬರೀಷ್ ಅವರ ನಾಲ್ಕು ನೇ ವರ್ಷ ಪುಣ್ಯತಿಥಿ


ಬೆಂಗಳೂರು : ದಾನಶೂರ ಕರ್ಣ ಖ್ಯಾತಿಯ ಹಿರಿಯ ನಟ ಅಂಬರೀಷ್ ಇಂದಿಗೆ ನಮ್ಮನ್ನಗಲಿ ನಾಲ್ಕು ವರ್ಷ ಕಳೆದಿದೆ. ಅಂಬಿ ಪುಣ್ಯತಿಥಿಯ ಅಂಗವಾಗಿ ಸುಮಲತಾ ಹಾಗೂ ಅಭಿಷೇಕ್ ಅಂಬರೀಷ್, ಅಂಬಿ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.

ಬೆಳಗ್ಗೆ 9ಕ್ಕೆ ಅಂಬರೀಷ್​ ಸಮಾಧಿಗೆ ಇವರು ಭೇಟಿ ನೀಡುವ ಸಾಧ್ಯತೆ ಇದೆ. ಕುಟುಂಬದವರು, ಆಪ್ತರು, ಅಭಿಮಾನಿಗಳು ಭೇಟಿ ನೀಡಲಿದ್ದಾರೆ. ಅಭಿಮಾನಿಗಳು ಅಂಬಿ ಹೆಸರಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಈ ಮೂಲಕ ಅಂಬರೀಷ್​ ಅವರನ್ನು ವಿಭಿನ್ನವಾಗಿ ನೆನಪಿಸಿಕೊಳ್ಳಲಾಗುತ್ತಿದೆ. ಇಂದು ಸಹ ಅಂಬಿ ಫ್ಯಾನ್ಸ್ ಅನ್ನದಾನ ಸೇರಿದಂತೆ ಹಲವು ಸೇವೆಗಳಲ್ಲಿ ಭಾಗಿಯಾಗಲಿದ್ದಾರೆ.

ಕನ್ನಡ ಚಿತ್ರರಂಗದ ಅಜಾತಶತ್ರುವಾಗಿದ್ದ ಅಂಬಿ ನವೆಂಬರ್ 24, 2018ರಂದು ಹೃದಯಾಘಾತದಿಂದ ಮರಳಿ ಬಾರದ ಲೋಕಕ್ಕೆ ತೆರಳಿದರು. ಸಿನಿಮಾ ಮಾತ್ರವಲ್ಲದೆ, ರಾಜಕೀಯ ರಂಗದಲ್ಲೂ ಅಂಬರೀಷ್ ಸಾಧನೆ ಅಪಾರ. ಶಾಸಕ, ಸಂಸದ, ಸಚಿವ, ಕೇಂದ್ರ ಸಚಿವರಾಗಿಯೂ ಅವರು ಕೆಲಸ ಮಾಡಿದ್ದರು.‌ ಚಿತ್ರರಂಗದ ಯಾವುದೇ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸುವ ದೊಡ್ಡಣ್ಣನಂತಿದ್ದರು.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *