ಬೆಂಗಳೂರು : ಅಗ್ನಿಸಾಕ್ಷಿ’ ಹಾಗೂ `ಬಿಗ್ ಬಾಸ್’ ನಲ್ಲಿ ಖ್ಯಾತಿ ಘಳಿಸಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಾಕಷ್ಟು ಸಮಯದ ಬಳಿಕ ವೈಷ್ಣವಿ ಗೌಡ ಕಿರುತೆರೆಯತ್ತ ಮತ್ತೆ ಮುಖ ಮಾಡಿದ್ದಾರೆ. ಹೊಚ್ಚ ಹೊಸ ಪಾತ್ರದ ಮೂಲಕ ಟಿವಿ ಪರದೆಯಲ್ಲಿ ಮಿಂಚಲು ವೈಷ್ಣವಿ ಗೌಡ ರೆಡಿಯಾಗಿದ್ದಾರೆ.
ಕಿರುತೆರೆಯ ಟಾಪ್ ಒನ್ ಸೀರಿಯಲ್ ಅಗ್ನಿಸಾಕ್ಷಿ ನಾಯಕಿಯಾಗಿ ಮೋಡಿ ಮಾಡಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಲಗ್ಗೆ ಕನ್ನಡಿಗರ ಮನ ಗೆದ್ದಿದ್ದರು. ಇದೀಗ ಲಾಂಗ್ ಗ್ಯಾಪ್ ನಂತರ `ಸೀತಾರಾಮ’ ಧಾರಾವಾಹಿ ಮೂಲಕ ನಟಿ ವೈಷ್ಣವಿ ಗೌಡ ಕಂಬ್ಯಾಕ್ ಮಾಡ್ತಿದ್ದಾರೆ.
ಸ್ವಪ್ನ ಕೃಷ್ಣ ನಿರ್ದೇಶನದ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿಯಾಗಿ ವೈಷ್ಣವಿ ಎಂಟ್ರಿ ಕೊಡ್ತಿದ್ದಾರೆ. ʻಮಂಗಳಗೌರಿ ಮದುವೆʼಖ್ಯಾತಿಯ ಗಗನ್ಗೆ ಜೋಡಿಯಾಗಿ ನಟಿ ಬರುತ್ತಿದ್ದಾರೆ. ಸಿನಿಮಾ ಮತ್ತು ಸೀರಿಯಲ್ ಎರಡನ್ನ ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ಇದು ನಿಜಕ್ಕೂ ವೈಷ್ಣವಿ ಫ್ಯಾನ್ಸ್ಗೆ ಡಬಲ್ ನ್ಯೂಸ್ ಎಂದೇ ಹೇಳಬಹುದು. ಸದ್ಯದಲ್ಲೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, `ಅಗ್ನಿಸಾಕ್ಷಿ’ ನೋಡಿ ಮೆಚ್ಚಿಕೊಂಡಿದ್ದ ಫ್ಯಾನ್ಸ್ಗೆ ಸೀತಾರಾಮ ಸೀರಿಯಲ್ ಮೂಲಕ ಕೂಡ ನಟಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡ್ತಾರೆ ಎಂಬುದನ್ನ ಕಾದುನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

