Breaking News

ನಾನು ರಾಹುಲ್ ಗಾಂಧಿಯನ್ನು ಹಲವು ವರ್ಷಗಳ ಹಿಂದೆಯೇ ಕೈಬಿಟ್ಟಿದ್ದೇನೆ : ರಾಗಾ



ಇಂದೋರ್ :  ನಾನು ರಾಹುಲ್ ಗಾಂಧಿಯನ್ನು ಹಲವು ವರ್ಷಗಳ ಹಿಂದೆಯೇ ಕೈಬಿಟ್ಟಿದ್ದೇನೆ. ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ. ನನ್ನಲ್ಲಿಲ್ಲ.. ಈ ರೀತಿ ವೇದಾಂತಿಯಂತೆ ಮಾತನಾಡಿ ರಾಹುಲ್ ಗಾಂಧಿ ಪತ್ರಕರ್ತರನ್ನೇ ತಬ್ಬಿಬ್ಬು ಮಾಡಿದ್ದಾರೆ.

ಇಂದೋರ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯ ಪ್ರಶ್ನೋತ್ತರ ಅವಧಿಯಲ್ಲಿ ರಾಹುಲ್ ಉತ್ತರಗಳು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್‍ನ ಮುಂದಾಳುವನ್ನಾಗಿ ಬಿಂಬಿಸಲು ಹಲವು ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲಿ ಭಾರತ ಐಕ್ಯತಾ ಯಾತ್ರೆ ಪ್ರಮುಖವಾಗಿದೆ. ಯಾತ್ರೆ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಇಂಧೋರ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಭಾರತ ಜೋಡೊ ಯಾತ್ರೆಯಿಂದ ಜನ ರಾಹುಲ್ ಗಾಂಧಿ ಅವರನ್ನು ಯಾವ ರೀತಿ ಪರಿಗಣಿಸಬೇಕೆಂದು ಬಯಸುತ್ತೀರಾ ಎಂದು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಹಲವು ವರ್ಷಗಳ ಹಿಂದೆಯೇ ನಾನು ರಾಹುಲ್ ಗಾಂಧಿಯನ್ನು ಕೈಬಿಟ್ಟಿದ್ದೇನೆ. ಆದರೆ ರಾಹುಲ್ ಗಾಂಧಿ ಇನ್ನು ಮನಸ್ಸಿನಲ್ಲಿದ್ದಾರೆ. ನನ್ನಲ್ಲಿಲ್ಲ. ನಿಮಗೆ ಅರ್ಥವಾಯಿತೇ? ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಎಂದು ಹೇಳಿದ್ದಾರೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *