ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ವರ್ಗಾವಣೆ ಭರಾಟೆ ಜೋರಾಗಿದೆ. ಇತ್ತ ವರ್ಗಾವಣೆ ಬೇಡ ಎಂದರು,ವರ್ಗಾವಣೆ ಮಾಡುತ್ತೀರುವ ಪೋಲಿಸ್ ಅಧಿಕಾರಿಗಳು ಅತ್ತ ಒಳ ರಾಜಕೀಯ ಮಾಡಿ ಅದೇ ಠಾಣೆಯಲ್ಲಿ ಠೀಕಾಣಿ ಹೂಡಿದ ಪ್ರಬಲ ಪೋಲಿಸ್ ಸಿಬ್ಬಂದಿಗಳು , ಈ ಎಲ್ಲದರ ನಡಿವೆ ನಿಷ್ಠಾವಂತ ಪ್ರಮಾಣಿಕ ಪೋಲಿಸ್ ಸಿಬ್ಬಂದಿಗಳಿಗೆ ಬೆಲೆ ಇಲ್ಲದಂತಾಗಿದ. ನಿನ್ನೆ ನಿಮ್ಮ ಬಿಗ್ ಟಿ.ವಿ. ವರ್ಗಾವಣೆ ರಾಜಕೀಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿತ್ತು, ಅದಕ್ಕೆ ಸಾಕ್ಷಿ ಎಂಬತ್ತೆ, ಇವತ್ತು ವರ್ಗಾವಣೆ ಮಾಡಿದ ಸಲುವಾಗಿ ಬೇಸತ್ತು ಪೋಲಿಸ್ ಕಾನ್ಸ್‌ಟೇಬಲ್ ಒಬ್ಬರು. ಸ್ವಯಂ ನಿವೃತ್ತಿ ಘೋಷಣೆ ಮಾಡಿದ ಘಟನೆ ನಡೆದಿದೆ.

ಧಾರವಾಡ ಜಿಲ್ಲೆಯಲ್ಲಿ ಅವಧಿಗೆ ಮುನ್ನವೇ ತಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂದು ಬೇಸತ್ತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಸ್ವಯಂ ನಿವೃತ್ತಿ ಕೋರಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.
ಅಳ್ಳಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆರ್.ಎನ್.ಗೊರಗುದ್ದಿ ಎಂಬುವವರೇ ಸ್ವಯಂ ನಿವೃತ್ತಿ ಕೋರಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸ ಅವರಿಗೆ ಪತ್ರ ಬರೆದಿದ್ದಾರೆ.
ನಮ್ಮ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಮ್ಮದು ಅವಿಭಕ್ತ ಕುಟುಂಬ. ನಾನೊಬ್ಬನೇ ಸರ್ಕಾರಿ ನೌಕರನಾಗಿದ್ದು, ಕುಟುಂಬ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. 2008ರಲ್ಲಿ ಹಾವೇರಿಯಿಂದ ಧಾರವಾಡಕ್ಕೆ ವರ್ಗಾವಣೆಯಾದೆ. ನನಗೆ ಸೇವಾ ಜೇಷ್ಠತೆ ಇದ್ದರೂ ತಂದೆ, ತಾಯಿಗಳ ಪೋಷಣೆಗಾಗಿ ಬಿಟ್ಟುಕೊಟ್ಟಿದ್ದೇನೆ. ಹಿರಿಯ ನೌಕರರು ಯಾವುದೇ ಸಮಸ್ಯೆಗಳನ್ನು ಹೇಳುವ ಪರಿಸ್ಥಿತಿ ಇಲ್ಲ. ಸಮಸ್ಯೆಗಳನ್ನು ಹೇಳಲು ಬಂದಾಗ ಅಮಾನತ್ತು, ಸೇವೆಯಿಂದ ವಜಾ ಮಾಡುವ ಧಮ್ಮ್ಕಿ ಹಾಕುವ ಕೆಲಸ ನಡೆಯುತ್ತಿದೆ.
ಎಂದು ಆರೋಪಿಸಿರುವ ಅವರು, ನನಗೆ ಹಿರಿಯ ಅಧಿಕಾರಿಗಳಿಂದಲೂ ಮಾನಸಿಕ ಹಿಂಸೆಯಾಗುತ್ತಿದೆ. ಡಿಸಿಆರ್‌ಬಿ ವಿಭಾಗದಿಂದ ಅಳ್ಳಾವರ ಠಾಣೆಯ ವರ್ಗಾವಣೆಯಾಗಿತ್ತು. ಅಲ್ಲಿಯೂ ಕರ್ತವ್ಯಕ್ಕೆ ಬಿಡದೇ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ 27 ವರ್ಷ 8 ತಿಂಗಳು ಸೇವೆ ಸಲ್ಲಿಸಲಾಗಿದೆ. ಇನ್ನೂ 8-9 ವರ್ಷ ಸೇವಾವಧಿ ಇದೆ. ಹೀಗಾಗಿ ನನ್ನದು 30 ವರ್ಷ ಸೇವೆ ಎಂದೇ ಪರಿಗಣಿಸಿ ಸಂಪೂರ್ಣ ಸೇವಾ ಸ್ವಯಂ ನಿವೃತ್ತಿ ಕೊಡಬೇಕು ಎಂದು ಎಸ್‌ಪಿ ಅವರಿಗೆ ಪತ್ರ ಬರೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

