Breaking News

ಮೂವರು ಚಾಲಾಕಿ ಬೈಕ್ ಕಳ್ಳರು ಅಂದರ್

ಹುಬ್ಬಳ್ಳಿ: ಕೇಶ್ವಾಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಯೂನಿಯನ್ ಆಫೀಸ್ ಹತ್ತಿರ ಲಾಕ್ ಮಾಡಿ ನಿಲ್ಲಿಸಿದ ಮೋಟರ ಸೈಕಲಗಳು ಮೇಲಿಂದ ಮೇಲೆ ಕಳ್ಳತನವಾಗುತ್ತಿದ್ದ ಬಗ್ಗೆ ಪ್ರಕರಣಗಳು ಕೇಶ್ವಾಪೂರ ಠಾಣೆಯಲ್ಲಿ ದಾಖಲಾಗಿದ್ದವು. ಪ್ರಕರಣದ ಜಾಡು ಹಿಡಿದು ಹೊರಟ ಕೇಶ್ವಾಪೂರ ಪೊಲೀಸರು ಮೂವರು ಬೈಕ್ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.

ಹೌದು.. ಕೇಶ್ವಾಪೂರ ಠಾಣೆ ಪೊಲೀಸ್ ಇನ್ಸೆಕ್ಟರ್ ಜಗದೀಶ ಹಂಚನಾಳ ನೇತೃತ್ವದ ತಂಡ ಮೂವರು ಆರೋಪಿತರನ್ನು ಹಿಡಿದು ವಿಚಾರಿಸಿದಾಗ ಆರೋಪಿತರು ಒಟ್ಟು 09 ಮೋಟರ್ ಸೈಕಲಗಳನ್ನು ಕಳ್ಳತನ ಮಾಡಿರುವ ಬಗ್ಗೆ ಹೇಳಿದ್ದು, ಆ ಒಂಬತ್ತು ಮೋಟರ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೂ ಆರೋಪಿತರು ಹಳೇ ವಾಹನಗಳಿಗೆ ಕಾಗದ ಪತ್ರಗಳು ಸರಿಯಾಗಿ ಇರುವುದಿಲ್ಲ. ಅವುಗಳನ್ನು ಕಳ್ಳತನ ಮಾಡಿದರೆ ಮಾಲಿಕರು ಠಾಣೆಯಲ್ಲಿ ದೂರು ನೀಡುವದಿಲ್ಲ ಎಂದು ಹಳೇ ವಾಹನಗಳನ್ನೆ ನಕಲಿ ಕೀ ಬಳಿಸಿ ಕಳ್ಳತನ ಮಾಡುತ್ತಿದ್ದರು ಎಂಬುವಂತ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಕುರಿತು ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *