Breaking News

ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ವಿ.ಎಂ. ಪಾಟೀಲ್​  ನಿಧನ



ಬೆಂಗಳೂರು: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ,​ ಅತಿ ವಿಶಿಷ್ಟ ಸೇವಾ ಪದಕ ಮತ್ತು ಪರಮ ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತರಾಗಿದ್ದ ವಿ.ಎಂ. ಪಾಟೀಲ್​ ಅವರು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 84ವರ್ಷ ವಯಸ್ಸಾಗಿತ್ತು.

ಲೆಫ್ಟಿನೆಂಟ್​ ಜನರಲ್​ ವಿ.ಎಂ.ಪಾಟೀಲ್​ ಅವರು 1962ರ ಭಾರತ-ಚೀನಾ ಯುದ್ಧ ಮತ್ತು 1965ರ ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಎರಡೂ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಮೊದಲ ರಕ್ಷಣಾ ಸಲಹೆಗಾರರಾಗಿದ್ದರು. ಅಷ್ಟೇ ಅಲ್ಲ, ಇರಾನ್​-ಇರಾಕ್​​ನಲ್ಲಿದ್ದ ವಿಶ್ವಸಂಸ್ಥೆಯ ಸೇನಾ ವೀಕ್ಷಕರ ಗುಂಪಿನ ಕಮಾಂಡರ್​ ಕೂಡ ಆಗಿದ್ದರು. ಅಖಿಲ ಭಾರತೀಯ ಪೂರ್ವ ಸೈನಿಕ ಸೇವಾ ಪರಿಷತ್ತಿನ ಅಧ್ಯಕ್ಷರಾಗಿಯೂ ಮತ್ತು ಫೋರಮ್​ ಫಾರ್​ ಇಂಟಿಗ್ರೇಟೆಡ್​ ನ್ಯಾಶನಲ್​ ಸೆಕ್ಯೂರಿಟಿ (ಸಮಗ್ರ ರಾಷ್ಟ್ರೀಯ ಭದ್ರತೆ ಫೋರಮ್​)ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಹಿರಿಯ ಸೇನಾಧಿಕಾರಿ ವಿ.ಎಂ. ಪಾಟೀಲ್ ನಿಧನಕ್ಕೆ ಆರ್​ಎಸ್​ಎಸ್​​ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Share News

About BigTv News

ಬಿ.ವೈ.ವಿಜಯೇಂದ್ರ

Check Also

ಗಾಂಜಾ ಕೇಸ್: ಚಾರ್ಮಾಡಿ ನಿವಾಸಿಗೆ 5 ವರ್ಷ ‘ಕಠಿಣ’ ಶಿಕ್ಷೆ ವಿಧಿಸಿದ ಮಂಗಳೂರು ನ್ಯಾಯಾಲಯ

ಬೆಳ್ತಂಗಡಿ: ಸುಮಾರು ಒಂದೂವರೆ ದಶಕದ ಹಿಂದೆ ಉಜಿರೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಚಾರ್ಮಾಡಿ ನಿವಾಸಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯವು …

Leave a Reply

Your email address will not be published. Required fields are marked *